ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆರೆ ಕಾಮೇಗೌಡರು ಇನ್ನಿಲ್ಲ

Team Newsnap
1 Min Read

16 ಕೆರೆಗಳನ್ನು ಸಂರಕ್ಷಣೆ ಮಾಡಿ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದ ಮಳವಳ್ಳಿ ತಾಲೂಕು ದಾಸನದೊಡ್ಡಿ ಗ್ರಾಮದ ಕೆರೆ ಕಾಮೇಗೌಡರು ಇಂದು ಬೆಳಿಗ್ಗೆ ನಿಧನರಾದರು. ಕಾಮೇಗೌಡರಿಗೆ (76) ಇಬ್ಬರು ಗಂಡು ಮಕ್ಕಳು ಇದ್ದಾರೆ. ಇವರೂ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

kere kame

ದಾಸನದೊಡ್ಡಿ, ಕುಂದೂರು ಬೆಟ್ಟ ಸುತ್ತ ಮುತ್ತಲಿನ ಅರಣ್ಯ ಪರಿಸರದಲ್ಲಿ 16 ಕೆರೆಗಳನ್ನು ನಿರ್ಮಾಣ ಮಾಡಿ , ಸಮರ್ಥವಾಗಿ ಸಂರಕ್ಷಣೆ ಮಾಡಿದ ಕಾಮೇಗೌಡರು ಸಮಾಜಕ್ಕೆ ಮತ್ತು ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಆಧುನಿಕ ಭಗೀರಥ ಎಂದೇ ಖ್ಯಾತಿ ಪಡೆದಿದ್ದರು.

ಪ್ರಾಣಿ ಪ್ರೀಯ ಗೌಡರು ಕುರಿ ಕಾಯುತ್ತಲೇ ತಮ್ಮ ಸ್ವಂತ ಸಂಪಾದನೆಯ ಹಣದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರಿಂದ ಕೇಂದ್ರ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅನೇಕ ಸಂಘ ಸಂಸ್ಥೆಗಳು ಕೂಡ ಪ್ರಶಸ್ತಿಗಳನ್ನು ನೀಡಿವೆ. ಮಳವಳ್ಳಿಯಲ್ಲಿ ಬಾಲಕಿಯ ಅತ್ಯಾಚಾರ- ಹತ್ಯೆ : ಗಲ್ಲುಶಿಕ್ಷೆ ನೀಡುವುದನ್ನು ಅಪ್ಪ, ಅಮ್ಮ ನೋಡಬೇಕು : ಸುಮಲತಾ

ಇಳೀ ವಯಸ್ಸಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವೇಳೆಯಲ್ಲಿ ಗೌಡರನ್ನು ಜಿಲ್ಲಾ ಆಸ್ಪತ್ರೆಗೆ ಕರೆದು ತಂದು ಚಿಕಿತ್ಸೆ ನೀಡುವ ವೇಳೆಯಲ್ಲೇ ನಂಗೆ ಈ ಆಲೋಪತಿ ಚಿಕಿತ್ಸೆ ಒಗ್ಗುವುದಿಲ್ಲ ಎಂದು ಆಸ್ಪತ್ರೆಯಿಂದಲೇ ಎದ್ದು ಹೋಗಿ ತಮ್ಮ ಸರಳತೆ ಜೀವನ ಶೈಲಿಯಿಂದ ಆರೋಗ್ಯವನ್ನು ಸರಿಪಡಿಸಿಕೊಂಡಿದ್ದನ್ನು ಸ್ಮರಿಸಬಹುದು.

Share This Article
Leave a comment