ನೇಣಿಗೆ ಶರಣಾದ ಕಿರುತೆರೆ ನಟಿ ವೈಶಾಲಿ ಠಕ್ಕರ್: ಡೆತ್‌ನೋಟ್‌ ಪತ್ತೆ

Team Newsnap
1 Min Read
TV actress Vaishali Thakkar committed Suicide : Death note found ನೇಣಿಗೆ ಶರಣಾದ ಕಿರುತೆರೆ ನಟಿ ವೈಶಾಲಿ ಠಕ್ಕರ್: ಡೆತ್‌ನೋಟ್‌ ಪತ್ತೆ

ಹಿಂದಿ ಕಿರುತೆರೆ ನಟಿ ವೈಶಾಲಿ ಠಕ್ಕರ್ (26)​ ಮಧ್ಯಪ್ರದೇಶದ ಇಂದೋರ್​ನಲ್ಲಿರುವ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮುರುಘಾ ಮಠಕ್ಕೆ ನೂತನ ಪೀಠಾಧ್ಯಕ್ಷರಾಗಿ ಬಸವ ಪ್ರಭು ಶ್ರೀಗಳ ಆಯ್ಕೆ – ಜಿತೇಂದ್ರ

WhatsApp Image 2022 10 16 at 5.45.10 PM

ವೈಶಾಲಿ ಅವರು ತಂದೆ ಮತ್ತು ಸಹೋದರನೊಂದಿಗೆ ಇಂದೋರ್‌ನಲ್ಲಿ ನೆಲೆಸಿದ್ದರು. ಘಟನಾ ಸ್ಥಳದಲ್ಲಿ ಡೆತ್‌ ನೋಟ್​ ಕೂಡ ಸಿಕ್ಕಿದ್ದು, ಘಟನೆಗೆ ಸಂಬಂಧಿಸಿ ತೇಜಾಜಿ ನಗರ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹಿಂದಿ ಕಿರುತೆರೆಯಲ್ಲಿ ವೈಶಾಲಿ ಸಾಕಷ್ಟು ಖ್ಯಾತಿ ಗಳಿಸಿದ್ದರು. ಸಸುರಾಲ್ ಸಿಮರ್ ಕಾ’ ಧಾರಾವಾಹಿಯಲ್ಲಿ ಅವರು ಅಂಜಲಿ ಭಾರದ್ವಾಜ್ ಎಂಬ ಪಾತ್ರ ಮಾಡಿದ್ದರು.ಯೇ ರಿಷ್ತಾ ಕ್ಯಾ ಕೆಹಲಾತಾ ಹೈ’, ʻರಕ್ಷಾ ಬಂಧನ್ʼ ಮುಂತಾದ ಧಾರಾವಾಹಿಗಳಲ್ಲಿ ವೈಶಾಲಿ ಠಕ್ಕರ್ ನಟಿಸಿದ್ದರು. `ಬಿಗ್ ಬಾಸ್’ಮೂಲಕ ನಟಿ ಮೋಡಿ ಮಾಡಿದ್ದರು.

‘ಸಸುರಾಲ್​ ಸಿಮರ್​ ಕಾ’ ಧಾರಾವಾಹಿ ಮೂಲಕ ಹಿಂದಿ ಕಿರುತೆರೆಗೆ ಕಾಲಿಟ್ಟ ವೈಶಾಲಿ, ಸಾಕಷ್ಟು ಖ್ಯಾತಿ ಗಳಿಸಿದ್ದರು. ‘ಸೂಪರ್​ ಸಿಸ್ಟರ್ಸ್​’, ‘ಮನಮೋಹಿನಿ 2’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಇತ್ತೀಚೆಗೆ ‘ಯೇ ರಿಷ್ತಾ ಕ್ಯಾ ಕೆಹಲಾತಾ ಹೈ’, ‘ಯೇ ಹೈ ಆಶಿಕಿ’, ‘ರಕ್ಷಾ ಬಂಧನ್​’ ಮುಂತಾದ ಧಾರಾವಾಹಿಗಳಲ್ಲಿ ವೈಶಾಲಿ ನಟಿಸಿದ್ದರು.

ವೈಶಾಲಿ ನಿಧನದಿಂದಾಗಿ ಕುಟುಂಬಸ್ಥರು ದುಃಖತಪ್ತರಾಗಿದ್ದಾರೆ.

Share This Article
Leave a comment