ಮುರುಘಾ ಮಠಕ್ಕೆ ನೂತನ ಪೀಠಾಧ್ಯಕ್ಷರಾಗಿ ಬಸವ ಪ್ರಭು ಶ್ರೀಗಳ ಆಯ್ಕೆ – ಜಿತೇಂದ್ರ

Team Newsnap
1 Min Read
The administrator appointed to Muruga Mutt should withdraw the order: Basavaprabhu Shri ಮುರುಘಾ ಮಠಕ್ಕೆ ನೇಮಕ ಮಾಡಲಾಗಿರುವ ಆಡಳಿತಾಧಿಕಾರಿ ಆದೇಶ ವಾಪಸ್ ಪಡೆದುಕೊಳ್ಳಬೇಕು : ಬಸವಪ್ರಭು ಶ್ರೀ

ಚಿತ್ರದುರ್ಗದ ಜಗದ್ಗುರು ಮರುಘ ರಾಜೇಂದ್ರ ಬ್ರಹನ್ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಬಸವಪ್ರಭು ಶ್ರೀಗಳನ್ನು ಪ್ರಭಾರ ಪೀಠಾಧಿಪತಿಯಾಗಿ ಅಧಿಕೃತವಾಗಿ ನೇಮಕ ಮಾಡಲಾಗಿದೆ.

ಶಿವಮೂರ್ತಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಹೀಗಾಗಿ ಅವರನ್ನು ಮರುಘಾ ಮಠದ ಪೀಠಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಒತ್ತಡ ಜೋರಾಗಿತ್ತು. ಈ ಹಿನ್ನೆಲೆಯಲ್ಲಿ ಮುರುಘಾ ಮಠದ ಆಡಳಿತ ಮಂಡಳಿ ಜೊತೆ ವೀರಶೈವ ಸಮಾಜದ ಮುಖಂಡರು ಸಭೆ ನಡೆಸಿದ್ದರು.

ಸಭೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದ ಬಳಿಕ ಮುರುಘಾ ಮಠದ ಆಡಳಿತ ಸಲಹಾ ಸಮಿತಿ ಸದಸ್ಯ ಜೀತೇಂದ್ರ ಬಸವಪ್ರಭು ಶ್ರೀಗಳನ್ನು ಪ್ರಭಾರ ಪೀಠಾಧಿಪತಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಇದನ್ನು ಓದಿ –ಮಳವಳ್ಳಿಯಲ್ಲಿ ಬಾಲಕಿ ಅತ್ಯಾಚಾರ,ಹತ್ಯೆ :ಕುಟುಂಬಕ್ಕೆ 10 ಲಕ್ಷ ರು ಪರಿಹಾರ- ಸಿಎಂ ಘೋಷಣೆ

ಮುರುಘಾ ಶ್ರೀಗಳ ಸೂಚನೆ ಹಾಗೂ ಕಾನೂನು ಸಲಹೆ ಪಡೆದು ಈ ರೀತಿಯ ನಿರ್ಧಾರವನ್ನು ಮಾಡಿದ್ದೇವೆ. ಹೆಬ್ಬಾಳು ಮಠದ ಶ್ರೀಗಳ ನೇಮಕ ಆಗಿನ ತುರ್ತು ಪರಿಸ್ಥಿತಿಯಲ್ಲಿ ಆಗಿತ್ತು. ಈಗ ಅಧಿಕೃತವಾಗಿ ಬಸವ ಪ್ರಭು ಶ್ರೀಗಳನ್ನು ನೇಮಕ ಮಾಡಲಾಗಿದೆ ಎಂದು ಜೀತೇಂದ್ರ ಹೇಳಿದ್ದಾರೆ.

Share This Article
Leave a comment