ಮಳವಳ್ಳಿಯಲ್ಲಿ ಬಾಲಕಿ ಅತ್ಯಾಚಾರ,ಹತ್ಯೆ :ಕುಟುಂಬಕ್ಕೆ 10 ಲಕ್ಷ ರು ಪರಿಹಾರ- ಸಿಎಂ ಘೋಷಣೆ

Team Newsnap
1 Min Read
CM to lay foundation on 19th march for the construction of Ram mandir in Ramnagar ರಾಮನಗರದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಾ. 19 ರಂದು ಸಿಎಂ ಶಂಕುಸ್ಥಾಪನೆ

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಬಾಲಕಿಯ ಮೇಲಿನ ಅತ್ಯಾಚಾರ, ಕೊಲೆಯ ಪ್ರಕರಣದ ಬಗ್ಗೆ ಸಿಎಂ ಬೊಮ್ಮಾಯಿ ತೀವ್ರ ದುಃಖ ವ್ಯಕ್ತ ಪಡಿಸಿ,ಮೃತ ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡ ಮತ್ತು ಸಂಸ್ಕೃತಿ ಮುಜರಾಯಿ ಮತ್ತು ಧಾರ್ಮಿಕ ದತ್ತಿ, ಪ್ರವಾಸೋದ್ಯಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾಡಳಿತ ಮಂಡ್ಯ ಜಿಲ್ಲೆ ಇವರುಗಳ ಸಹಯೋಗದೊಂದಿಗೆ ಕೆ ಆರ್ ಪೇಟೆ ಸಂಗಮ, ಅಂಬಿಗರಹಳ್ಳಿ – ಸಂಗಾಪುರ – ಪುರದಲ್ಲಿ ಆಯೋಜಿಸಿರುವ ಮಲೆಮಹದೇಶ್ವರರ ಮಹಾಕುಂಭಾ ಮೇಳ 2022 ಮಹೋತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಂಸದೆ ಸುಮಲತಾ ಮಳವಳ್ಳಿಯ ಘಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ದಾರೆ. ಇದು ಸಮಾಜದಲ್ಲಿ ಎಂದೆಂದೂ ನಡೆಯಬಾರದು. ಇದೊಂದು ಅತ್ಯಂತ ಅಮಾನುಷ್ಯ ಕೃತ್ಯವಾಗಿದೆ. ಇದನ್ನು ಎಷ್ಟು ಕಠಿಣ ಶಬ್ದಗಳಲ್ಲಿ ಖಂಡಿಸೋದಕ್ಕೆ ಸಾಧ್ಯಾನೋ ಅಷ್ಟು ಹೇಳಿದರು ಅದು ಕಡಿಮೆಯೇ. ಏನೂ ಅರಿಯದ ಕಂದಮ್ಮನ ಪರಿಸ್ಥಿತಿ ನೋಡಿದರೆ ಕರುಳು ಕಿತ್ತು ಬರುತ್ತದೆ ಎಂದರು.ಬಾಡಿಗೆ ತಾಯ್ತತನ: ವಿಘ್ನೇಶ್ ,ನಯನಾತಾರಾ 6 ವರ್ಷದ ಹಿಂದೆಯೇ ರಿಜಿಸ್ಷ್ರಾರ್ ವಿವಾಹ – ವಿವಾದಕ್ಕೆ ತೆರೆ

ಈ ನಡುವೆ ಸಿಎಂ ಮಾತನಾಡಿ ಪೊಲೀಸ್ ಇಲಾಖೆಯಿಂದ ಸಮಗ್ರ ತನಿಖೆಯ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಎಲ್ಲಾ ಕೇಸ್ ಹಾಕಿದ್ದಾರೆ. ಈಗಾಗಲೇ ಪೊಲೀಸ್ ಮಹಾನಿರ್ದೇಶಕರಿಗೂ ನಾನು ಸೂಚನೆ ನೀಡಿದ್ದೇನೆ. ಎಫ್‌ಎಸ್‌ಎಲ್ ವರದಿ ಬಂದ ನಂತರ ಚಾರ್ಜ್ ಶೀಟ್ ಹಾಕುವುದಾಗಿ ಹೇಳಿದ್ದಾರೆ. ಪ್ರಕರಣ ಸಂಬಂಧ ಆರೋಪಿಗೆ ಉಗ್ರ ಶಿಕ್ಷೆ ಆಗಬೇಕು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

Share This Article
Leave a comment