ಬಾಡಿಗೆ ತಾಯ್ತತನ: ವಿಘ್ನೇಶ್ ,ನಯನಾತಾರಾ 6 ವರ್ಷದ ಹಿಂದೆಯೇ ರಿಜಿಸ್ಷ್ರಾರ್ ವಿವಾಹ – ವಿವಾದಕ್ಕೆ ತೆರೆ

Team Newsnap
1 Min Read
Surrogacy: Vignesh, Nayanatara registered marriage 6 years ago - open to controversy ಬಾಡಿಗೆ ತಾಯ್ತತನ: ವಿಘ್ನೇಶ್ ,ನಯನಾತಾರಾ 6 ವರ್ಷದ ಹಿಂದೆಯೇ ರಿಜಿಸ್ಷ್ರಾರ್ ವಿವಾಹ - ವಿವಾದಕ್ಕೆ ತೆರೆ

ಕೆಲ ದಿನಗಳಿಂದ ನಯನತಾರಾ ದಂಪತಿ ಸಖತ್ ಸುದ್ದಿಯಲ್ಲಿದ್ದಾರೆ. ಆ ದಂಪತಿಗೆ ಬಾಡಿಗೆ ತಾಯ್ತತನದ ವಿಷಯಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.

ಕಳೆದ ಜೂನ್ 2ರಂದು ಮದುವೆಯಾದ ಈ ಜೋಡಿಗೆ 4 ತಿಂಗಳಲ್ಲಿ ಮಗು ಹೇಗೆ ಸಾಧ್ಯ ಎಂದು ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ ಎಂದು ಸುದ್ದಿಯಾದ ಬೆನ್ನಲ್ಲೇ, ಇವರು ಬಾಡಿಗೆ ತಾಯ್ತನದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಮಾತು ಹರಿದಾಡಿತ್ತು. ನಂತರ ಈ ದಂಪತಿಯ ವಿರುದ್ಧ ದೂರು ದಾಖಲಾಗಿತ್ತು. ಆದರೆ ಈಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ಅರಸೀಕೆರೆ ಅಪಘಾತ : ಮೃತರ ಕುಟುಂಬಕ್ಕೆ ಸರ್ಕಾರದಿಂದ 2 ಲಕ್ಷ ರು ಪರಿಹಾರ ಘೋಷಣೆ

ಕಾನೂನು ಬದ್ಧವಾಗಿ ಈ ದಂಪತಿಗಳು ದಾಖಲೆಗಳನ್ನು ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ನಯನತಾರಾ ದಂಪತಿಗಳು ಆರು ವರ್ಷಗಳ ಹಿಂದೆಯೇ ರಿಜಿಸ್ಟ್ರಾರ್‌ ಮದುವೆಯಾಗಿದ್ದರು ಇದಕ್ಕೆ ಸಂಬಂಧಿಸಿದ ಕಾನೂನಾತ್ಮಕ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲದೇ, 2021ರಲ್ಲೇ ಬಾಡಿಗೆ ತಾಯ್ತನದ ಒಪ್ಪಂದಕ್ಕೆ ದಂಪತಿ ಸಹಿ ಹಾಕಿರುವುದಕ್ಕೆ ಸಂಬಂಧಿಸಿದ ದಾಖಲೆ ಕೂಡ ಸಲ್ಲಿಸಿದ್ದಾರೆ.

ಕಳೆದ ಜೂನ್ ಸಂಪ್ರದಾಯಿಕವಾಗಿ ಮದುವೆ ಆದರು ಆದರೆ ಆರು ವರ್ಷಗಳ ಹಿಂದೆಯೇ ರಿಜಿಸ್ಟ್ರಾರ್ ಮದುವೆ ಆಗಿದ್ದಾರೆ. ಹೀಗಾಗಿ ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎನ್ನಲಾಗುತ್ತಿದೆ. ಈ ಮೂಲಕ ಈ ಬಾಡಿಗೆ ತಾಯ್ತನದ ಪ್ರಕರಣಕ್ಕೆ ಅಂತ್ಯ ಕಾಣುವ ಎಲ್ಲಾ ಲಕ್ಷಣಗಳು ಇದೆ.

Share This Article
Leave a comment