March 31, 2023

Newsnap Kannada

The World at your finger tips!

cm , Karnataka , politics

Cabinet expansion- wait and see: CM Bommai ಸಂಪುಟ ವಿಸ್ತರಣೆ- ಪುನರ್‌ ರಚನೆಯೋ ಕಾದು ನೋಡಿ: ಸಿಎಂ ಬೊಮ್ಮಾಯಿ

ಅರಸೀಕೆರೆ ಅಪಘಾತ : ಮೃತರ ಕುಟುಂಬಕ್ಕೆ ಸರ್ಕಾರದಿಂದ 2 ಲಕ್ಷ ರು ಪರಿಹಾರ ಘೋಷಣೆ

Spread the love

ಅರಸೀಕೆರೆ ತಾಲೂಕಿನ ಹಳ್ಳಿಕೆರೆಯಲ್ಲಿ ಸಂಭವಿಸಿದ ಸರ್ಕಾರಿ ಬಸ್ ಹಾಗೂ ಹಾಲಿನ ಟ್ಯಾಂಕರ್ ಮತ್ತು ಟೆಂಪೋ ಟ್ರಾವೆಲರ್ ನಡುವೆ ಭೀಕರ ಅಪಘಾತದಲ್ಲಿ ಮೃತರಲ್ಲಿ ಒಂದೇ ಗ್ರಾಮದ ಏಳು ಜನರು ಸಾವನ್ನಪ್ಪಿದ್ದಾರೆ. ಹಾಗೂ ಮತ್ತೊಂದು ಗ್ರಾಮದ ಇಬ್ಬರು ಮೃತಪಟ್ಟಿದ್ದಾರೆ.

ಸಾಲಾಪುರ (ಹಳ್ಳಿಕೆರೆ) ಗ್ರಾಮದ 7 ಹಾಗೂ ದೊಡ್ಡೇನಹಳ್ಳಿ ಗ್ರಾಮದ ಇಬ್ಬರು ಸಾವನ್ನಪ್ಪಿದ್ದಾರೆ. ದೊಡ್ಡೇನಹಳ್ಳಿಯ ಕಂದಮ್ಮ ಧ್ರುವಾ (2), ತನ್ಮಯ್(10), ಸಾಲಾಪುರದ ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ವಂದನಾ (20), ದೊಡ್ಡಯ್ಯ (60), ಭಾರತಿ(50) ಮೃತ ದುರ್ದೈವಿಗಳು.ವಿಜಿಲೆನ್ಸ್ ಅಧಿಕಾರಿಗೆ 50 ಲಕ್ಷ ರು ಆಮಿಷ; ಪಂಜಾಬ್‌ನ ಮಾಜಿ ಸಚಿವ ಬಂಧನ

ಈ ಅಪಘಾತ ಕುರಿತು ಸಿಎಂ ಬೊಮ್ಮಾಯಿ ಟ್ವೀಟ್​​ ಮಾಡಿ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತರಾಗಿರುವುದು ತೀವ್ರ ದುಃಖದಾಯಕ.

ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರುತ್ತೇನೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಮತ್ತು ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದರು. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಷೋಷಿಸಿದ್ದಾರೆ.

error: Content is protected !!