ವಿಜಿಲೆನ್ಸ್ ಅಧಿಕಾರಿಗೆ 50 ಲಕ್ಷ ರು ಆಮಿಷ; ಪಂಜಾಬ್‌ನ ಮಾಜಿ ಸಚಿವ ಬಂಧನ

Team Newsnap
1 Min Read
PSI Scam: ED raids RD Patil's residence ಪಿಎಸ್‌ಐ ಹಗರಣ: ಆರ್‌ಡಿ ಪಾಟೀಲ್ ನಿವಾಸದ ಮೇಲೆ ಇಡಿ ದಾಳಿ

ತನ್ನ ವಿರುದ್ಧದ ಪ್ರಕರಣವನ್ನು ಇತ್ಯರ್ಥಗೊಳಿಸಲು ಅಧಿಕಾರಿಯೊಬ್ಬರಿಗೆ 50 ಲಕ್ಷ ರು ಆಮಿಷ ಒಡ್ಡಿರುವ ಆರೋಪದ ಮೇಲೆ ಪಂಜಾಬ್‌ನ ಮಾಜಿ ಸಚಿವ ಸುಂದರ್ ಶ್ಯಾಮ್ ಅರೋರಾ ಅವರನ್ನು ಪಂಜಾಬ್ ವಿಜಿಲೆನ್ಸ್ ಬ್ಯೂರೊ ಭಾನುವಾರ ಬಂಧಿಸಿದೆ.

ಕಾಂಗ್ರೆಸ್ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಅರೋರಾ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಪಂಜಾಬ್ ವಿಜಿಲೆನ್ಸ್ ಬ್ಯೂರೊದ ಮುಖ್ಯ ನಿರ್ದೇಶಕ ವರೀಂದರ್ ಕುಮಾರ್, ಈ ಕುರಿತಂತೆ ಮಾಹಿತಿ ನೀಡಿ ವಿಜಿಲೆನ್ಸ್ ಅಧಿಕಾರಿಗೆ 50 ಲಕ್ಷ ರು ಆಮಿಷ ಒಡ್ಡಿರುವ ಅರೋರಾ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.ಬೆಂಗಳೂರು – ಮೈಸೂರು ರಸ್ತೆ ಸಂಚಾರ ಸುಗಮ: ತಗ್ಗಿದ ಬೂದನೂರು ಕೆರೆ ನೀರಿನ ಪ್ರವಾಹ 

ಪ್ರಕರಣದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ ಮನಮೋಹನ್ ಶರ್ಮಾ ಅವರಿಗೆ 1 ಕೋಟಿ ರು ಆಮಿಷ ಒಡ್ಡಿದರು. ಮೊದಲ ಕಂತಿನ ಭಾಗವಾಗಿ 50 ಲಕ್ಷ ರು ನಗದು ಹೊಂದಿರುವ ಬ್ಯಾಗ್ ಅಧಿಕಾರಿಗೆ ಹಸ್ತಾಂತರಿಸುವ ವೇಳೆಯಲ್ಲಿ ಮಾಜಿ ಸಚಿವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a comment