ಮಂಡ್ಯದಲ್ಲಿ ಮತ್ತೆ ಭಾರಿ ಮಳೆ : KRS ನಿಂದ 56 ಸಾವಿರ ಕ್ಯೂಸೆಕ್ ನೀರು ನದಿ, ನಾಲೆಗೆ ಬಿಡುಗಡೆ

Team Newsnap
1 Min Read

ಮಂಡ್ಯದಲ್ಲಿ ಎರಡು ದಿನಗಳಿಂದ ಧಾರಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಳ್ಳ, ನದಿಗಳೆಲ್ಲಾ ಭರ್ತಿಯಾಗಿ ಹರಿಯುತ್ತಿದೆ. ಕೆಆರ್‌ ಎಸ್‌ ಡ್ಯಾಂ ಕೂಡ ಒಳಹರಿವಿನ ಪ್ರಮಾಣದಲ್ಲಿ 54,311 ಕ್ಯೂಸೆಕ್ ನೀರು ಏರಿಕೆಯಾಗಿದೆ.

ಕಳೆದೆರಡು ದಿನಗಳಿಂದ ಕಾವೇರಿ ಜಲನಯನ ಪ್ರದೇಶದಲ್ಲಿ ಉತ್ತಮವಾದ ಮಳೆಯಾಗುತ್ತಿರುವ ಕಾರಣ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ.

ಒಳ ಹರಿವು ಏರಿಕೆಯಾಗುತ್ತಿದ್ದಂತೆ ಹೊರ ಹರಿವಿನ ಪ್ರಮಾಣವನ್ನು ಅಧಿಕಾರಿಗಳು ಹೆಚ್ಚಿಸಿದ್ದಾರೆ. ಡ್ಯಾಂ ಸಂಪೂರ್ಣ ಭರ್ತಿಯಾಗಿರುವ ಕಾರಣ ಡ್ಯಾಂನಿಂದ ನದಿಗೆ 56,624 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಎ.ಪಿ.ಜೆ.ಅಬ್ದುಲ್ ಕಲಾಂ ( Abdul Kalam )

124.80 ಅಡಿ ಗರಿಷ್ಟ ಸಾಮರ್ಥ್ಯವಿರುವ ಕೆಆರ್‌ಎಸ್ ಡ್ಯಾಂ ಸದ್ಯ 124.70 ಅಡಿಯಷ್ಟು ಭರ್ತಿಯಾಗಿದೆ. ಡ್ಯಾಂಗೆ 54,311 ಕ್ಯೂಸೆಕ್ ಒಳಹರಿವು ಬರುತ್ತಿದ್ದರೆ, 56,624 ಕ್ಯೂಸೆಕ್ ನೀರು ಡ್ಯಾಂನಿಂದ ನದಿಗೆ ಹೋಗುತ್ತಿದೆ. ಕೆಆರ್‍ಎಸ್ ಡ್ಯಾಂ 49.475 ಟಿಎಂಸಿ ನೀರಿನ ಸಾಂದ್ರತೆ ಹೊಂದಿದ್ದು, ಸದ್ಯ 49.312 ಟಿಎಂಸಿ ಭರ್ತಿಯಾಗಿದೆ.

Share This Article
Leave a comment