ಮುಂದಿನ ದಿನಗಳಲ್ಲಿ ನಾನೂ ವೆಬ್ ಸಿರೀಸ್ ನಲ್ಲಿ ನಟಿಸುತ್ತೇನೆ. ಇತ್ತೀಚೆಗೆ ವೆಬ್ ಸಿರೀಸ್ ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ವೆಬ್ ಸಿರೀಸ್ ಬಗ್ಗೆ ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ.
OTT, APP ರಿಲೀಸ್ ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್, ತಂತ್ರಜ್ಞಾನಕ್ಕೆ ನಾವು ಹೊಂದಿಕೊಳ್ತಾ ಹೋಗಬೇಕು. ಸಿನಿಮಾ ಮಾಡೋದಷ್ಟೇ ಅಲ್ಲ ನಿರ್ಮಾಣ ಮಾಡ್ತೀವಿ. ವೆಬ್ ಸಿರೀಸ್ ನಿರ್ಮಾಣವನ್ನೂ ಮಾಡುತ್ತೇವೆ. ವೆಬ್ ಸಿರೀಸ್ ನಿರ್ಮಾಣದಲ್ಲಿ ಮಗಳು ಕೂಡ ಭಾಗಿಯಾಗುತ್ತಾಳೆ ಎಂದು ಹೇಳಿದರು.
ನಾನು ಯಂಗ್ ಕಾಣ್ತೀನಿ ಅಂತ ಎಲ್ಲರೂ ಹೇಳ್ತಾರೆ. ಯಂಗ್ ಗಿಂತಲೂ ಹೆಂಗೆಂಗೋ ಇರಲು ಇಷ್ಟ ನನಗೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಹಿಂದಿ ರಾಷ್ಟ್ರಭಾಷೆ ವಿವಾದದ ವಿಚಾರವಾಗಿಯೂ ಮಾತನಾಡಿದ ಶಿವಣ್ಣ, ಎಲ್ಲಾ ಭಾಷೆಯೂ ಒಂದೇ ಎಂದು ರಾಷ್ಟ್ರಗೀತೆಯಲ್ಲಿದೆ. ಮಾತೃಭಾಷೆ ವಿಚಾರಕ್ಕೆ ಬಂದರೆ ಕನ್ನಡವೇ ನಮಗೆ ಮುಖ್ಯ. ನಮ್ಮ ಎಲ್ಲಾ ಭಾಷೆಯೂ ಭಾರತದ್ದೆ. ನಾವೆಲ್ಲರೂ ಒಂದೇ. ಭಾರತದಲ್ಲಿ ಎಲ್ಲಾ ಭಾಷೆಯೂ ಇದೆ. ನನಗೆ ಕನ್ನಡವೇ ಮುಖ್ಯ ಎಂದು ಹೇಳಿದ್ದಾರೆ.
- ಬಿಗ್ ಬಾಸ್ ತೆಲುಗು ಗೆದ್ದ ಮೈಸೂರಿನ ನಿಖಿಲ್ ಮಳಿಯಕ್ಕಲ್
- ವಿಶ್ವದಾಖಲೆ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ವಿಧಿವಶ
- ಕಾಲ್ತುಳಿತದಲ್ಲಿ ಮಹಿಳೆ ಸಾವು: ನಟ ಅಲ್ಲು ಅರ್ಜುನ್ ಬಂಧನ
- ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ನಾಗಚೈತನ್ಯ ಮತ್ತು ಶೋಭಿತಾ
- ಕರ್ನಾಟಕದಲ್ಲಿ ‘ಪುಷ್ಪ 2’ಗೆ ಶಾಕ್- ಪ್ರದರ್ಶನ ರದ್ದಿಗೆ ಆದೇಶ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
- ತಂದೆಯಾದ ಅಭಿಷೇಕ್: ಮರಿ ರೆಬಲ್ ಸ್ಟಾರ್ ಗೆ ಜನ್ಮ ನೀಡಿದ ಅವಿವಾ
- ಬಿಗ್ಬಾಸ್ ನಿರೂಪಣೆಗೆ ಸುದೀಪ್ ವಿದಾಯ: ಕಿಚ್ಚನ ಅಧಿಕೃತ ಘೋಷಣೆ!
More Stories
ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ: ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶ
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ