June 7, 2023

Newsnap Kannada

The World at your finger tips!

ACCIDENT

ಕೆ ಆರ್. ಪೇಟೆ ಮಂದಗೆರೆ ಬಳಿ ಮೈಸೂರು-ಧಾರವಾಡ ರೈಲಿನಲ್ಲಿ ಬೆಂಕಿ: ಆತಂಕದಲ್ಲಿದ್ದ ಪ್ರಯಾಣಿಕರು!

Spread the love

ಮಂಡ್ಯ ಜಿಲ್ಲೆಯ ಕೆ ಆರ್. ಪೇಟೆ ಮಂದಗೆರೆ ಬಳಿ ಧಾರವಾಡ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಧ್ಯರಾತ್ರಿ ಬೆಂಕಿ ಅವಘಡ ಸಂಭವಿಸಿದೆ. ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ.

ರೈಲು ಮೈಸೂರಿನಿಂದ ಧಾರವಾಡಕ್ಕೆ ತೆರಳುವ ವೇಳೆ ಮಂದಗೆರೆ ಬಳಿ ರೈಲಿನಲ್ಲಿ ರಾತ್ರಿ 12 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ತಕ್ಷಣವೇ ಚಾಲಕ ಬೆಂಕಿ ಗಮನಿಸಿ ರೈಲನ್ನು ನಿಲ್ಲಿಸಿದ್ದರಿಂದ ಅನಾಹುತ ತಪ್ಪಿದೆ. ಕೂಡಲೇ ಬೋಗಿಯಿಂದ ಪ್ರಯಾಣಿಕರು ಕೆಳಗಿಳಿದ ಹಿನ್ನೆಲೆಯಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ ರೈಲಿನಿಂದ ಕೆಳಗೆ ಇಳಿಯುವಾಗ ತಳ್ಳಾಟ ನೂಕಾಟ ನಡೆದಿದ್ದರಿಂದ ಕೆಲ ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ತಕ್ಷಣವೇ ರೈಲ್ವೆ ಸಿಬ್ಬಂದಿ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ‌ ನಂದಿಸುವ ಕಾರ್ಯ ಮಾಡಿದ್ದಾರೆ.

ಒಂದು ಗಂಟೆಗೂ‌ ಹೆಚ್ಚು ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ.

error: Content is protected !!