ಉಡುಪಿಯ ಮುಖ್ಯ ಪೇದೆ ಆತ್ಮಹತ್ಯೆ ಪ್ರಕರಣ – ಡೆತ್ ನೋಟ್ ನಲ್ಲಿ ಸ್ಫೋಟಕ ಮಾಹಿತಿ

Team Newsnap
1 Min Read

ಉಡುಪಿಯ ಮುಖ್ಯ ಪೇದೆ ಆತ್ಮಹತ್ಯೆ ಪ್ರಕರಣ – ಡೆತ್ ನೋಟ್ ನಲ್ಲಿ ಸ್ಫೋಟಕ ಮಾಹಿತಿ

ಕೈಯಲ್ಲಿದ್ದ ರೈಫಲಿನ ಗುಂಡೇಟಿಗೆ ಬಲಿಯಾದ ಉಡುಪಿಯ ಡಿ.ಆರ್ ಮುಖ್ಯ ಪೇದೆ ರಾಜೇಶ್ ಕುಂದರ್ ಪ್ರಕರಣಕ್ಕೆ ಸ್ಪೋಟಕ ತಿರುವು ಕಂಡಿದೆ

ಶನಿವಾರ ಬೆಳಿಗ್ಗೆ ರಾಜೇಶ್ ಕುಂದರ್ ಸ್ವ ಹಸ್ತಾಕ್ಷರದಲ್ಲಿ ಬರೆದ ಡೆತ್ ನೋಟ್ ಲಭ್ಯವಾಗಿದೆ. ಅವರ ಆತ್ಮಹತ್ಯೆಗೆ ಮೂವರು ಪೋಲಿಸರ ವಿರುದ್ದ ಆತ್ಮಹತ್ಯೆ ಪ್ರಚೋದನಾ ಪ್ರಕರಣ ದಾಖಲಾಗಿದೆ

ಡಿಎಆರ್‌ ಎಪಿಸಿ ಉಮೇಶ, ಡಿಎಆರ್‌ ಎಪಿಸಿ ಅಶ್ಫಕ್‌, ಗಂಗೊಳ್ಳಿ ಠಾಣಾ ಪಿ.ಎಸ್.ಐ ನಂಜ ನಾಯ್ಕ್ ಹಾಗೂ ಇನ್ನೋರ್ವ ವ್ಯಕ್ತಿಯ ವಿರುದ್ದ ಸೆಕ್ಷನ್ 306 ರ ಅಡಿಯಲ್ಲಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಗುರುವಾರ ರಾತ್ರಿ ನಗರದ ಆದಿ ಉಡುಪಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಉತ್ತರ ಪತ್ರಿಕೆಯ ಕಾವಲಿಗೆ ಮೂವರು ಡಿ‌.ಆರ್ ಪೋಲಿಸರನ್ನು ನಿಯೋಜಿಸಲಾಗಿತ್ತು.

ಶುಕ್ರವಾರ ಬೆಳಿಗ್ಗೆ ಕುರ್ಚಿಯಲ್ಲೇ ಕುಳಿತ ಸ್ಥಿತಿಯಲ್ಲಿ ರಾಜೇಶ್ ಮೃತ ದೇಹ ಪತ್ತೆಯಾಗಿತ್ತು.

ಶನಿವಾರ ಬೆಳಿಗ್ಗೆ ರಾಜೇಶ್ ಕುಂದರ್ ಜೊತೆ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಗಣೇಶ್ ಎಂಬವರು ಎಂದಿನಂತೆ ಕಚೇರಿಗೆ ತೆರಳಿ ತನ್ನ ಬ್ಯಾಗನ್ನು ಪರಿಶೀಲಿಸುತ್ತಿದ್ದಾಗ ನೋಟ್ ಬುಕ್ ನ ಒಂದು ಹಾಳೆ ರಾಜೇಶ್ ಅವರು ಬರೆದ ಡೆತ್ ನೋಟ್ ಪತ್ತೆಯಾಗಿದೆ.

ಮೇಲಾಧಿಕಾರಿಗಳಿಗೆ ಈ ಮಾಹಿತಿಯನ್ನು ತಿಳಿಸಿ ನಗರ ಠಾಣೆಗೆ ಡೆತ್ ನೋಟನ್ನು ಹಾಜರು ಪಡಿಸಿದ್ದಾರೆ.

ಮೃತ ಡಿಆರ್ ಹೆಡ್ ಕಾನ್ಸ್ಟೇಬಲ್ ರಾಜೇಶ್ ಅವರು ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದೆ.

ಡೆತ್ ನೋಟನ್ನು ಹ್ಯಾಂಡ್ ರೈಟಿಂಗ್ ತಜ್ಞರಿಗೆ ಪರಿಶೀಲನೆಗೆ ಕಳುಹಿಸಿದ್ದೇವೆ. ರಾಜೇಶ್ ಅವರ ಆತ್ಮಹತ್ಯೆ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.

Share This Article
Leave a comment