ವಿಶ್ವ ನಗು ದಿನ (world smile day) 2023

Team Newsnap
3 Min Read

ನಗುವಿನಿಂದ ಇಡೀ ವಿಶ್ವವನ್ನೇ ಶಾಂತಿಯುತವಾಗಿ ಮತ್ತು ಪಾಸಿಟಿವ್‌ ಆಗಿ ಬದಲಾಯಿಸಬಹುದು ಎಂಬ ನಂಬಿಕೆಯಿಂದ ಡಾ. ಮದನ್‌ ಕಟಾರಿಯಾ ವಿಶ್ವ ನಗು ದಿನವನ್ನು ಆರಂಭಿಸಿದರು.

ಮೊದಲ ಬಾರಿಗೆ ವಿಶ್ವ ನಗು ದಿನವನ್ನು 1998, ಜನವರಿ 10 ರಂದು ಮುಂಬಯಿನಲ್ಲಿ ಆಚರಿಸಲಾಯಿತು.ವಿಶ್ವ ನಗು ಯೋಗ ಅಭಿಯಾನದ ಸಂಸ್ಥಾಪಕರಾದ ಡಾ. ಮದನ್‌ ಕಟಾರಿಯಾ ಅವರು ನಗುವಿಗಿರುವ ಅನನ್ಯ ಶಕ್ತಿಯನ್ನು ಗಮನಿಸಿ ಇಂಥದ್ದೊಂದು ದಿನವನ್ನು ಆರಂಭಿಸಿದರು.

ನಗು ನಮಗೆ ದೇವರು ನೀಡಿದ ವರದಾನ. ಅಂದೆಂತಹ ಬೇಸರಗಳಿದ್ದರೂ ಒಂದು ಸುಂದರವಾದ ನಗುವಿನ ಮೂಲಕ ಅದನ್ನು ದೂರ ಮಾಡಬಹುದು,ನಗುವಿಗೆ ಒಂದು ರೀತಿಯ ಪಾಸಿಟಿವ್‌ ಎನರ್ಜಿಯಿದೆ. ಎಂತಹ ಸಮಸ್ಯೆಯನ್ನೂ ಪರಿಹರಿಸುವ ಶಕ್ತಿಯಿದೆ. ನಗು ನಮ್ಮ ಬಾಳಿನ ದಿವ್ಯ ಔಷಧಿ ಇದ್ದ ಹಾಗೆ. ಈ ನಗುವಿನ ಮಹತ್ವವನ್ನು ಗಮನಿಸಿ ನಗುವಿಗಾಗಿಯೇ ಒಂದು ದಿನವನ್ನು ಮೀಸಲಾಗಿಟ್ಟಿದ್ದಾರೆ.

ಮಾನವ ಆರೋಗ್ಯದಲ್ಲಿ ಮನಸ್ಸು ಅತಿ ಮುಖ್ಯ ಪಾತ್ರವಹಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ನಗುವಾಗ ಮನಸ್ಸು ಉಲ್ಲಾಸಗೊಂಡು ಎಲ್ಲಾ ನೋವು, ದುಃಖವನ್ನು ಮರೆಸುತ್ತದೆ, ನಗು ಮೆದುಳಿನಲ್ಲಿರುವ ನರಗಳನ್ನು ಉತ್ತೇಜಿಸಿ. ಅನೇಕ ಸರಣಿ ಪ್ರಕ್ರಿಯೆಗಳು ಆರಂಭವಾಗುವಂತೆ ಮಾಡುತ್ತದೆ.

ನಗುವಿನಿಂದಾಗುವ ಪ್ರಯೋಜನಗಳು:

1 ಮನಸ್ಥಿತಿಯನ್ನು ಹತೋಟಿಗೆ ತರುತ್ತದೆ

ನಗು (ಹಾರ್ಮೋನ್) ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ, ಇದು ಒಬ್ಬ ವ್ಯಕ್ತಿಗೆ ಸಂತೋಷ ಮತ್ತು ಹೆಚ್ಚು ಧನಾತ್ಮಕವಾಗಿರಲು ಸಹಾಯ ಮಾಡುತ್ತದೆ.ಕೆಲವು ವೈಜ್ಞಾನಿಕ ಅಧ್ಯಯನದ ಪ್ರಕಾರ ನಗುವು ಮನಸ್ಸಿನ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಧನಾತ್ಮಕ ಆಲೋಚನೆಗಳನ್ನು ಹೆಚ್ಚಿಸುತ್ತದೆ.

2. ಬಲವಾದ ರಕ್ಷಣಾ ವ್ಯವಸ್ಥೆ

ನಗುವುದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಹೌದು ಒಂದು ನಗುವಿನೊಂದಿಗೆ ಆರಂಭವಾಗುವ ನಗು ನಮ್ಮ ಪ್ರತಿರಕ್ಷಣಾ ಕೋಶಗಳನ್ನು ಹೆಚ್ಚಿಸುತ್ತದೆ ಮತ್ತು ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ಸೃಷ್ಠಿಸುತ್ತದೆ,

3. ಒತ್ತಡ ನಿವಾರಕ

ನಗು ಒತ್ತಡದ ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ನಿವಾರಿಸುತ್ತದೆ. ನಗುವಾಗ ಎಲ್ಲಾ ನೋವುಗಳನ್ನು ಮರೆಯುತ್ತೇವೆ. ಆ ಕ್ಷಣದಲ್ಲಿ ಹೊಸ ಹಾರ್ಮೋನ್ ಗಳು ಬಿಡುಗಡೆಯಾಗುತ್ತದೆ. ಮೆದುಳಿನಲ್ಲಿ ಒತ್ತಡವನ್ನು ಕಡಿಮೆ ಮಾಡುವ ಹಾರ್ಮೋನ್ ಗಳ ಬಿಡುಗಡೆಗೆ ನೆರವಾಗುತ್ತದೆ.

4. ಉತ್ತಮ ಸಂಬಂಧಗಳ ಕೊಂಡಿ

ಜನರೊಂದಿಗೆ ಸಂಬಂಧವನ್ನು ಬೆಳೆಸಲು ಮತ್ತು ನಿರ್ವಹಿಸಲು ನಿಮಗೆ ಉತ್ತಮ ಅವಕಾಶ,-ನಗು ನಿಮಗೆ ಮತ್ತು ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಪ್ರಯೋಜನವನ್ನು ನೀಡುತ್ತದೆ.

5. ಯೌವ್ವನ ಹೆಚ್ಚಿಸುತ್ತದೆ

ನಗುವಾಗ ಮುಖದ ಸ್ನಾಯುಗಳು ಹಿಗ್ಗಿ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹೆಚ್ಚಾಗಿ ನಗುವವರು ಚಿಕ್ಕವರಾಗಿ ಕಾಣುವಂತೆ ಮಾಡುತ್ತದೆ.ನಗುವಿನ ವ್ಯಕ್ತಿತ್ವ ಉಳ್ಳವರು ಹೆಚ್ಚು ಆತ್ಮಸ್ಥೈರ್ಯ ಹೊಂದಿರುತ್ತಾರೆ.

ಇನ್ನೂ ನಮ್ಮ ಹಿರಿಯರು ನಗುವಿನ ಬಗ್ಗೆ ‌ಅನನ್ಯ ಭಾವ ಹುಟ್ಟುವಂತೆ ಮಾಡಿದರು ಸಾಹಿತಿಗಳು ತಮ್ಮ‌ಕವಿತೆಗಳಲ್ಲಿ ಹಾಡು ಕಟ್ಟಿದರು. ಚಲನ ಚಿತ್ರಗಳಲ್ಲಿ ನಗುವಿನ‌‌ ಬಗ್ಗೆ ‌ಹಾಡು ಬರೆದು‌ ಜನಪ್ರಿಯತೆಗಳಿಸುವಂತೆ ಮಾಡಿ ಮನಸ್ಸಿಗೆ ಮುದ ಕೊಟ್ಟರು.

ಹುಣಸೂರು ಕೃಷ್ಣಮೂರ್ತಿಯವರು ಬರೆದ ಸಾಹಿತ್ಯ

ನಗು ನಗುತಾ ನಲಿ ನಲಿ
ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ
ಅದರಿ೦ದ ನೀ ಕಲಿ, ನಗು ನಗುತಾ ನಲಿ ನಲಿ ಏನೇ ಆಗಲಿ

ಡಿವಿಜಿ ಯವರ ಸಂದೇಶ

ನಗುವು ಸಹಜದ ಧರ್ಮ, ನಗಿಸುವುದು ಪರ ಧರ್ಮ, ನಗುವ ನಗಿಸುತ ನಗಿಸಿ, ನಗುತ ಬಾಳುವ ವರವ, ಮಿಗೆ ನೀನು ಬೇಡಿಕೊಳೊ, ಮಂಕುತಿಮ್ಮ . ನಗು ಮಾನವನಿಗೆ ಹೊಸ ಚೈತನ್ಯ ನೀಡುತ್ತದೆ. ಹೊಸ ಉತ್ಸಾಹವನ್ನು ನೀಡುತ್ತದೆ. ಸಣ್ಣ ನಗೆ ನಮ್ಮ ವ್ಯಕ್ತಿತ್ವವನ್ನು ಆಕರ್ಷಿಸುವ ಸಾಧನವೂ ಆಗಿದೆ.

ಗೋಪಾಲಕೃಷ್ಣ ಅಡಿಗರು

ಆಳುವ ಕಡಲಿನಲಿ ತೇಲಿ ಬರುತಲಿದೆ ನಗೆಯ ಹಾಯಿದೋಣಿ.

ದ.ರಾ.ಬೇಂದ್ರೆಯವರು

ಹುಸಿನಗುತ ಬಂದೇವ ನಸುನಗುತ ಬಾಳೋಣಾ ತುಸು ನಗುತ ತೆರಳೋಣಾ ಬಡನೂರು ವರುಷಾನ ಹರುಷದಿ ಕಳೆಯೋಣಾ ಯಾಕಾರ ಕೆರಳೋಣಾ ಏನೇ ದುಃಖ ದುಮ್ಮಾನಗಳಿದ್ದರೂ ಜೀವನವನ್ನು ನಗುನಗುತ್ತಾ ಬಾಳಬೇಕು ಎನ್ನುತ್ತಾರೆ.

ಎ ಡೇ ವಿತ್ ಔಟ್ ಲಾಫ್ ಈಸ್ ಡೇ ವೇಸ್ಟೆಡ್​’ (A Day Without Laughter Is Day Wasted)

ಚಾರ್ಲಿ ಚಾಂಪ್ಲಿನ್

ಒಂದು ಪದವೂ ಮಾತನಾಡದೆ ಕೇವಲ ಹಾವಭಾವಗಳಿಂದ ಇಡೀ ಜಗತ್ತಿಗೆ ನಗುವಿನ ಔತಣ ಬಡಿಸುತ್ತಿದ್ದ ಹಾಸ್ಯ ಬ್ರಹ್ಮ, ಹಾಸ್ಯ ಚಕ್ರವರ್ತಿ ಚಾರ್ಲಿ ಚಾಂಪ್ಲಿನ್​ ಅವರನ್ನು ನಾವು ನೆನೆಯಲೇಬೇಕು.

ಸರ್ವ ರೋಗಕ್ಕೂ ನಗು ನಮ್ಮಲ್ಲಿರುವ ಮದ್ದು. ವಿಶ್ವ ನಗೆ ದಿನವು ನಗುವಿನೊಂದಿಗೆ ಶಾಶ್ವತವಾದ ಅತ್ಯಂತ ಸುಂದರವಾದ, ಶಕ್ತಿಯುತ, ಸಕಾರಾತ್ಮಕ ಭಾವನೆಯನ್ನು ಪೋಷಿಸಲು ಮೀಸಲಾಗಿರುವ ದಿನವಾಗಿದೆ,

ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷ ಹರುಷಾ
ಬಾಳಿನ ದೀಪ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷ ಹರುಷಾ
ಉಲ್ಲಾಸದ ಶುಭ ದಿನಕೆ, ಸಂತೋಷವೇ ಉಡುಗೊರೆಯು

Share This Article
Leave a comment