ಬೆಂಗಳೂರು: ಮೈಕ್ ಹೆಸ್ಸನ್ RCB ನ ಮುಖ್ಯ ಕೋಚ್ ಆಗಿದ್ದ 4 ವರ್ಷಗಳ ಒಪ್ಪಂದದ ನಂತರ RCB ಮುಖ್ಯ ಕೋಚ್ ಬದಲಾಯಿಸಿದೆ, ಜಿಂಬಾಂಬ್ವೆ ತಂಡದ ಮಾಜಿ ಆಟಗಾರ ಆಂಡಿ ಫ್ಲವರ್ ಅವರನ್ನು ಮುಖ್ಯ ತರಬೇತುದಾರರಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇಂದು (ಆ.04) ಘೋಷಣೆ ಮಾಡಿದೆ. ಈ ಮೂಲಕ ಮೈಕ್ ಹೆಸ್ಸನ್ ಮತ್ತು ಸಂಜಯ್ ಬಂಗಾರ್ ಅವರ ಅವಧಿಯ ಅಂತ್ಯವನ್ನು ಆರ್ಸಿಬಿ ಖಚಿತಪಡಿಸಿದೆ.
2023 ಆವೃತ್ತಿಯಲ್ಲಿ ಆರ್ಸಿಬಿ ತಂಡವು ಹೀನಾಯ ಸೋಲನ್ನು ಅನುಭವಿಸಿತು. ಈ ಆವೃತಿಯ ಬಳಿಕ ಆರ್ಸಿಬಿ ಫ್ರಾಂಚೈಸಿ ಆಂತರಿಕ ಪರಿಶೀಲನೆ ನಡೆಸಿದ್ದು, ಅದರ ಭಾಗವಾಗಿ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಮೈಕ್ ಹೆಸ್ಸನ್ ಮತ್ತು ಮುಖ್ಯ ಕೋಚ್ ಸಂಜಯ್ ಬಂಗಾರ್ ಅವರ ಒಪ್ಪಂದವನ್ನು ನವೀಕರಿಸದಿರುವ ನಿರ್ಧಾರವನ್ನು RCB ದೃಢಪಡಿಸಿದೆ. ಬೆಂಗಳೂರಿನಲ್ಲಿ 45 ಕಚೇರಿಗಳ ಮೇಲೆ ಲೋಕಾ ದಾಳಿ : 3 ಲಕ್ಷ ಲಂಚ ಪಡೆದ ಪೌರಾಯುಕ್ತೆ ಲೋಕ ಬಲೆಗೆ.
ಆಂಡಿ ಫ್ಲವರ್ ಕ್ರಿಕೆಟ್ ಕರಿಯರ್
ಐಸಿಸಿ ಹಾಲ್ ಆಫ್ ಫೇಮ್ನಲ್ಲಿ ಸ್ಥಾನ ಪಡೆದ ಮೊದಲ ಆಟಗಾರನೆಂಬ ಹೆಗ್ಗಳಿಕೆಯನ್ನೂ ಆಂಡಿ ಫ್ಲವರ್ ಹೊಂದಿದ್ದಾರೆ. ಆಂಡಿ ಅವರು ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು.
- 63 ಟೆಸ್ಟ್ ಪಂದ್ಯ
- 12 ಶತಕ
- 51.54 ರನ್ ಬ್ಯಾಟಿಂಗ್ ಸರಾಸ
ಯಶಸ್ವಿ ಕ್ರಿಕೆಟ್ ಕರಿಯರ್ ಹೊಂದಿದ್ದಾರೆ. ಭಾರತದ ನೆಲದಲ್ಲೂ ಆಟಗಾರನಾಗಿ ಮತ್ತು ಕೋಚ್ ಆಗಿಯೂ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಇದೆ.
ಆಂಡಿ ಅವರು ಈಗಾಗಲೇ ಅಂತಾರಾಷ್ಟ್ರೀಯ ಮತ್ತು ಫ್ರಾಂಚೈಸಿ ಕ್ರಿಕೆಟ್ ತಂಡಗಳನ್ನು ದಶಕಗಳಿಗೂ ಹೆಚ್ಚು ಮುನ್ನಡೆಸಿರುವ ಅನುಭವವನ್ನು ಹೊಂದಿದ್ದಾರೆ. ಅಲ್ಲದೆ, ಕೋಚ್ ಆಗಿ PSL, ದಿ ಹಂಡ್ರೆಡ್, ಐಎಲ್ಟಿ20, ಟಿ10 ಟೂರ್ನಿಗಳಲ್ಲಿ ತಮ್ಮ ತಂಡವನ್ನು ಗೆಲ್ಲಿಸಿದ್ದಾರೆ. ಇಂಗ್ಲೆಂಡ್ ಪಾಲಿಗೆ ಅತ್ಯಂತ ಯಶಸ್ವಿ ತರಬೇತುದಾರರಾಗಿದ್ದ ಆಂಡಿ, ಅವರ ಅವಧಿಯಲ್ಲಿ ತವರು ಮತ್ತು ವಿದೇಶಿ ನೆಲದಲ್ಲಿ ಆಯಶಸ್ ಸರಣಿಗಳನ್ನು ಗೆದ್ದಿದ್ದಾರೆ ಮತ್ತು 2010ರಲ್ಲಿ T20 ವಿಶ್ವಕಪ್‌ನಲ್ಲಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಲ್ಲದೆ, ಇಂಗ್ಲೆಂಡ್ ಟೆಸ್ಟ್ ತಂಡವನ್ನು ವಿಶ್ವದ ನಂಬರ್ 1 ಸ್ಥಾನಕ್ಕೆ ತೆಗೆದುಕೊಂಡರು. ಲಾಲ್ ಬಾಗ್ ಫಲಪುಷ್ಪಪ್ರದರ್ಶನ : ವಾಹನ ನಿಲುಗಡೆ ಮಾಹಿತಿ ನೀಡಿದ ಬಿಟಿಪಿ
ಕೋಚ್ ಆಗಿ ನೇಮಕವಾದ ಬೆನ್ನಲ್ಲೇ ಸಂತಸ ವ್ಯಕ್ತಪಡಿಸಿರುವ ಆಂಡಿ ಫ್ಲವರ್, ನಾನು ಆರ್ಸಿಬಿ ತಂಡ ಸೇರುತ್ತಿರುವುದಕ್ಕೆ ನಿಜವಾಗಿಯೂ ಹೆಮ್ಮೆಯಾಗುತ್ತಿದೆ. ಈ ಫ್ರಾಂಚೈಸಿಯನ್ನು ಪ್ರತಿನಿಧಿಸಲು ನಿಜವಾಗಿಯೂ ಗೌರವವಿದೆ. ಆರ್ಸಿಬಿ ತಂಡವು ಅಪ್ರತಿಮ ಅಭಿಮಾನಿಗಳನ್ನು ಹೊಂದಿದೆ ಎಂದು ಕೊಂಡಾಡಿದ್ದಾರೆ. ಪುಟ್ಟ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
ನಾನು ಗೌರವಿಸುವ ಇಬ್ಬರು ತರಬೇತುದಾರರಾದ ಮೈಕ್ ಹೆಸ್ಸನ್ ಮತ್ತು ಸಂಜಯ್ ಬಂಗಾರ್ ಅವರ ಕೆಲಸವನ್ನು ನಾನು ಮೆಚ್ಚುತ್ತೇನೆ. ಪ್ರಸ್ತುತ RCB ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸವಾಲನ್ನು ನಾನು ಎದುರು ನೋಡುತ್ತಿದ್ದೇನೆ. ನಾನು ವಿಶೇಷವಾಗಿ ಫಾಫ್ ಜೊತೆ ಮತ್ತೆ ಒಂದಾಗಲು ಉತ್ಸುಕನಾಗಿದ್ದೇನೆ. ನಾವು ಈ ಹಿಂದೆ ಒಟ್ಟಿಗೆ ಕೆಲಸ ಮಾಡಿದ್ದೇವೆ ಮತ್ತು ನಮ್ಮ ಪಾಲುದಾರಿಕೆ ಹಾಗೂ ಸಂಬಂಧವನ್ನು ಇನ್ನೂ ಉತ್ತಮವಾದ ರೀತಿಯಲ್ಲಿ ರೂಪಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಆಂಡಿ ಫ್ಲವರ್ ಹೇಳಿದ್ದಾರೆ.
ಜಿಂಬಾಂಬ್ವೆ ಮಾಜಿ ಆಟಗಾರ ಆಯಂಡಿ ಫ್ಲವರ್ RCB ಮುಖ್ಯ ಕೋಚ್ ಆಗಿ ನೇಮಕ – Former Zimbabwe player Andy Flower appointed as RCB head coach #RCB #IPL #IPLKANNADA #SPORTSNEWS #KANNADANEWS #TRENDINGNEWS
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ