ಪುಟ್ಟ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ

Team Newsnap
1 Min Read

ಬೆಂಗಳೂರು: ತಮ್ಮ ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ವಿದ್ರಾವಕ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ ವೀರಾರ್ಜುನ ವಿಜಯ್ (31) ಹಾಗೂ ಹೇಮಾವತಿ (29) ಮೃತ ದಂಪತಿಗಳಾಗಿದ್ದಾರೆ.

ಸೋಮವಾರ ಈ ಘಟನೆ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ರಾತ್ರಿ ತಮ್ಮ ಮೋಕ್ಷ ಮೇಘನಯನ (1) ಹಾಗೂ ಸೃಷ್ಟಿ ಸುನಯನ (3) ಎಂಬ ತಮ್ಮ ಪುಟ್ಟ ಮಕ್ಕಳನ್ನು ಹತ್ಯೆಗೈದ ವಿಜಯ್ ದಂಪತಿಗಳು ಬಳಿಕ ತಾವೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಾಲ್‌ ಬಾಗ್‌ ಫಲಪುಷ್ಪಪ್ರದರ್ಶನ : ವಾಹನ ನಿಲುಗಡೆ ಮಾಹಿತಿ ನೀಡಿದ ಬಿಟಿಪಿ

ಆರು ವರ್ಷದ ಹಿಂದೆ ಇವರಿಬ್ಬರೂ ಮದುವೆಯಾಗಿದ್ದು, ಆತ್ಮಹತ್ಯೆಗೆ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಕಾಡುಗೋಡಿ ಠಾಣೆಯ ಪೊಲೀಸರು FIR ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

best kannada news #kannadanews #karnatakanews #banglorenews #crime #newsnap

Share This Article
Leave a comment