November 3, 2024

Newsnap Kannada

The World at your finger tips!

lalbagh botanical garden

ಲಾಲ್‌ ಬಾಗ್‌ ಫಲಪುಷ್ಪಪ್ರದರ್ಶನ : ವಾಹನ ನಿಲುಗಡೆ ಮಾಹಿತಿ ನೀಡಿದ ಬಿಟಿಪಿ

Spread the love

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಯುತ್ತಿರುವ ಲಾಲ್‌ ಬಾಗ್‌ ಫಲಪುಷ್ಪ ಪ್ರದರ್ಶನ ಶುಕ್ರವಾರದಿಂದ ಪ್ರಾರಂಭವಾಗಲಿದೆ.

ಆ. 15 ರವರೆಗೆ 12 ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ 8-10 ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆ ಇರುವುದರಿಂದ ವಾಹನ ನಿಲುಗಡೆ ಬಗ್ಗೆ ಬೆಂಗಳೂರು ಟ್ರಾಫಿಕ್‌ ಪೊಲೀಸ್‌ರು ಮಾಹಿತಿ ನೀಡಿದ್ದಾರೆ.

ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು

  • ಡಾ. ಮರಿಗೌಡ ರಸ್ತೆ, ಅಲ್‌ ಅಮೀನ್‌ ಕಾಲೇಜು ಆವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಬಹುದಾಗಿದೆ.
  • ಕೆ.ಎಚ್‌.ರಸ್ತೆ ಶಾಂತಿನಗರ ಬಿಎಂಟಿಸಿ ಬಸ್‌ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
  • ಡಾ. ಮರಿಗೌಡ ರಸ್ತೆ, ಹಾಪ್‌ ಕಾಮ್ಸ್‌ ನಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
  • ಜೆಸಿ ರಸ್ತೆ (JC Road) ಕಾರ್ಪೋರೇಷನ್‌ ಪಾರ್ಕಿಂಗ್‌ ಸ್ಥಳದಲ್ಲಿ ದ್ವಿಚಕ್ರ – ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
lal bhag 1
Lalbagh Botanical Garden in Bangalore

ಬೆಂಗಳೂರಿನಲ್ಲಿ 45 ಕಚೇರಿಗಳ ಮೇಲೆ ಲೋಕಾ ದಾಳಿ : 3 ಲಕ್ಷ ಲಂಚ ಪಡೆದ ಪೌರಾಯುಕ್ತೆ ಲೋಕ ಬಲೆಗೆ

ವಾಹನ ನಿಲುಗಡೆ ನಿಷೇಧಿಸಿರುವ ಸ್ಥಳಗಳು

  1. ಡಾ. ಮರಿಗೌಡ ರಸ್ತೆಯ ಲಾಲ್‌ ಭಾಗ್‌ ಮುಖ್ಯದ್ವಾರದಿಂದ ನಿಮ್ಹಾನ್ಸ್‌ ವರೆಗೆ ರಸ್ತೆಯ ಎರಡೂ ಬದಿಯಲ್ಲಿ
  2. ಕೆ.ಎಚ್‌ . ರಸ್ತೆಯ ಕೆ.ಎಚ್‌.ವೃತ್ತದಿಂದ ಶಾಂತಿನಗರ ಜಂಕ್ಷನ್‌ ವರೆಗೆ ರಸ್ತೆಯ ಎರಡೂ ಬದಿಯಲ್ಲಿ
  3. ಲಾಲ್‌ ಬಾಗ್ ‌ ರಸ್ತೆ ಸುಬ್ಬಯ್ಯ ವೃತ್ತದಿಂದ ಲಾಲ್‌ ಭಾಗ್‌ ಮುಖ್ಯದ್ವಾರದವರೆಗೆ
  4. ಸಿದ್ದಯ್ಯ ರಸ್ತೆ ಊರ್ವಶಿ ಥಿಯೇಟರ್‌ ಜಂಕ್ಷನ್‌ ನಿಂದ ವಿಲ್ಸನ್‌ ಗಾರ್ಡನ್‌ 12 ನೇ ಕ್ರಾಸ್‌ ವರೆಗೆ
  5. ಬಿಎಂಟಿಸಿ ರಸ್ತೆಯ ಎರಡೂ ಬದಿಗಳಲ್ಲಿ
  6. ಕೆಂಗಲ್ ‌ ರಸ್ತೆಯ ಎರಡೂ ಬದಿಗಳಲ್ಲಿ
  7. ಆರ್‌ ವಿ ಟೀಚರ್ಸ್‌ ಕಾಲೇಜ್‌ ನಿಂದ ಅಶೋಕ ಪಿಲ್ಲರ್‌ ವರೆಗೆ
  8. ಅಶೋಕ ಪಿಲ್ಲರ್‌ ನಿಂದ ಸಿದ್ದಾಪುರ ಜಂಕ್ಷನ್‌ ವರೆಗೆ

Flower show parking information, Flower show, Lalbhag, India #lalbhag #flowershow #india #mandya #mysore #bengaluru #ashokapillar #karnatakanews #bengalurunews

Copyright © All rights reserved Newsnap | Newsever by AF themes.
error: Content is protected !!