ಬೆಂಗಳೂರು: ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿನ ಕಂದಾಯ ಅಧಿಕಾರಿಗಳ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಗಳು ದಾಳಿ ನಡೆಸಿದ್ದಾರೆ
ಪದ್ಮನಾಭನಗರ, ಜಯನಗರ, ವಿಜಯನಗರ, ಬಸವನಗುಡಿ, ಬ್ಯಾಟರಾಯನಪುರ, ಯಲಹಂಕ, ವಿದ್ಯಾರಣ್ಯಪುರ, ಮಹದೇವಪುರ ಕೆ.ಆರ್.ಪುರಂ ಸೇರಿದಂತೆ ಒಟ್ಟು 45 ಆರ್‌ಒ, ಎಆರ್‌ಒ, ಎಡಿಟಿಪಿ ಅಧಿಕಾರಿಗಳ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಅಂಗಾಂಗ ದಾನ: ಕರ್ನಾಟಕ ರಾಜ್ಯಕ್ಕೆ ದೇಶದಲ್ಲಿ 3ನೇ ಸ್ಥಾನ.
ಪೌರಾಯುಕ್ತೆ – ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ಚಿತ್ರದುರ್ಗ: 3 ಲಕ್ಷ ರು ಲಂಚ ಪಡೆಯುತ್ತಿದ್ದ ವೇಳೆ ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಹಾಗೂ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಾಗರಾಜ್ ಎಂಬುವರ ಮನೆ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ಅದರಂತೆ ನಾಗರಾಜ್ ಅವರಿಂದ 3 ಲಕ್ಷ ಲಂಚ ಸ್ವೀಕಾರ ಮಾಡುತ್ತಿದ್ದಾಗ ಪೌರಾಯುಕ್ತೆ ಲೀಲಾವತಿ, ಬಿಲ್ ಕಲೆಕ್ಟರ್ ನಿಶಾಂತ್ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ತುಂಗಾಭದ್ರಾದಿಂದ 5575 ಕ್ಯೂಸೆಕ್ಸ್ ನೀರು ಹರಿಸಲು ಒಪ್ಪಿಗೆ – ಡಿಸಿಎಂ ಡಿ.ಕೆ.
ಚಿತ್ರದುರ್ಗ ಲೋಕಾಯುಕ್ತ ಎಸ್‌ಪಿ ವಾಸುದೇವರಾಮ ನೇತೃತ್ವದಲ್ಲಿ ನಡೆದ ದಾಳಿ ಇದಾಗಿದೆ.