July 7, 2022

Newsnap Kannada

The World at your finger tips!

nithyananda 1

ಕೈಲಾಸದಲ್ಲಿ ನಿತ್ಯಾನಂದನ ಮೂರ್ತಿಗೆ ಮಂಗಳಾರತಿ

Spread the love

ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂಬ ಸುದ್ದಿಯಾಗಿದ್ದ ನಿತ್ಯಾನಂದ ಕೆಲವು ದಿನಗಳ ಬಳಿಕ ಫೇಸ್‌ಬುಕ್ ಮೂಲಕ ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದರು. ಇದೀಗ ನಿತ್ಯಾನಂದ ಅವರ ಮೂರ್ತಿಗೆ ಪೂಜೆ ಸಲ್ಲಿಸುತ್ತಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ.

ಕೈಲಾಸದಲ್ಲಿ ತಲೆಮರೆಸಿಕೊಂಡಿರುವ ನಿತ್ಯಾನಂದನ ಪ್ರತಿಮೆಯನ್ನು ಸ್ಥಾಪಿಸಿ, ಪೂಜೆ, ಅಭಿಷೇಕ, ಅರ್ಚನೆಗಳನ್ನು ಮಾಡಲಾಗುತ್ತಿದೆ. ಚೈತ್ರ ನಕ್ಷತ್ರ ಹಬ್ಬದ ಹಿನ್ನೆಲೆ ಮೂರ್ತಿಗೆ ಪೂಜೆ ಸಲ್ಲಿಸಲಾಗಿದೆ ವೀಡಿಯೋ ಈಗ ವೈರಲ್ ಆಗುತ್ತಿದೆ. 

ಕೆಲವು ದಿನಗಳ ಹಿಂದೆ ನಿತ್ಯಾನಂದ ಅವರಿಗೆ ಅನಾರೋಗ್ಯವಿದ್ದ ಹಿನ್ನೆಲೆ ಅವರ ಮರಣ ಸಂಭವಿಸಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇದನ್ನು ಓದಿ : ಮೈಸೂರಿನಲ್ಲಿ ಯೋಗ ರಾಜಕಾರಣ – ಪ್ರತಾಪ್ ಸಿಂಹ, ಎಸ್.ಎ.ರಾಮದಾಸ್ ನಡುವೆ ಜಟಾಪಟಿ

ಈ ಬೆನ್ನಲ್ಲೇ ಕೈಲಾಸದಿಂದ ಸಂದೇಶವೊಂದು ಬಂದಿದೆ ನಿತ್ಯಾನಂದ ಆರೋಗ್ಯವಾಗಿದ್ದಾರೆ, ಶೀಘ್ರವೇ ಭಕ್ತರಿಗೆ ದರ್ಶನ ನೀಡಲಿದ್ದಾರೆ ಎಂದು ಹೇಳಲಾಗಿತ್ತು.

ಈಗ ನಿತ್ಯಾನಂದ ಮೂರ್ತಿಗೆ ಪೂಜೆ ಸಲ್ಲಿಸುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಜನರಲ್ಲಿ ಮತ್ತೆ ಪ್ರಶ್ನೆ ಎದ್ದಿದೆ. ಅನಾರೋಗ್ಯ ಎಂದಿದ್ದ ಬಳಿಕ ಯಾವುದೇ ಸುಳಿವು ನೀಡದ ನಿತ್ಯಾನಂದ ಸ್ವತಃ ಉತ್ತರಿಸುವವರೆಗೂ ಗೊಂದಲ ಮುಂದುವರಿದಿದೆ.

error: Content is protected !!