July 6, 2022

Newsnap Kannada

The World at your finger tips!

party

ಶಿಕ್ಷಕ ಮತದಾರರಿಗೆ ಎಣ್ಣೆ ಪಾರ್ಟಿ: ಫೋಟೊ, ವಿಡಿಯೊ ವೈರಲ್

Spread the love

ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರಿಗೆ ಆಮಿಷ ಒಡ್ಡಲು ನಿನ್ನೆ ತಡರಾತ್ರಿ ಮದ್ಯ ಹಾಗೂ ಮಾಂಸಾಹಾರದ ಪಾರ್ಟಿ ಮಾಡಿದ್ದಾರೆ

ಪಾರ್ಟಿಯ ಕೆಲವು ಫೋಟೊ ಹಾಗೂ ವಿಡಿಯೂ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಚಿಕ್ಕೋಡಿ ಪಟ್ಟಣದಲ್ಲಿರುವ ರಾಷ್ಟ್ರೀಯ ಪಕ್ಷವೊಂದರ ಕಚೇರಿ ಆವರಣದಲ್ಲಿ ಈ ಪಾರ್ಟಿ ಮಾಡಲಾಗಿದೆ. ಅಭ್ಯರ್ಥಿಯೇ ಭರ್ಜರಿ ಪಾರ್ಟಿ ಕೊಟ್ಟಿದ್ದಾರೆ. ಹಲವು ಶಿಕ್ಷಕರು ಇದರಲ್ಲಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಇದನ್ನು ಓದಿ : ಕೈಲಾಸದಲ್ಲಿ ನಿತ್ಯಾನಂದನ ಮೂರ್ತಿಗೆ ಮಂಗಳಾರತಿ

ಪಕ್ಷದ ಕಚೇರಿಯು ಚಿಕ್ಕೋಡಿ ಪಟ್ಟಣದ ಉಪ ವಿಭಾಗಾಧಿಕಾರಿ ಕಚೇರಿಗೆ ಹೊಂದಿಕೊಂಡೇ ಇದೆ. ಆದರೂ ಪಾರ್ಟಿ ನಡೆಸಿ, ನೀತಿ ಸಂಹಿತೆ ಉಲ್ಲಂಘಿಸಿದ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ.

error: Content is protected !!