July 7, 2022

Newsnap Kannada

The World at your finger tips!

yoga ,day,modi

International Yoga Day in Mysore: entry for Registered Only

ಮೈಸೂರಿನಲ್ಲಿ ಯೋಗ ರಾಜಕಾರಣ – ಪ್ರತಾಪ್ ಸಿಂಹ, ಎಸ್.ಎ.ರಾಮದಾಸ್ ನಡುವೆ ಜಟಾಪಟಿ

Spread the love

ಮೈಸೂರಿನಲ್ಲಿ ಜೂನ್ 21ರಂದು ನಡೆಯಲಿರುವ ಯೋಗ ದಿನಾಚರಣೆಯೂ ಕೂಡ ರಾಜಕಾರಣ ಪೈಪೋಟಿಯಲ್ಲಿ ನಡೆಯುತ್ತಿದೆ. ಮೈಲೇಜ್‍ಗಾಗಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್ ನಡುವೆ ತಿಕ್ಕಾಟ ನಡೆದಿದೆ.

ಮೈಸೂರಿನ ಅರಮನೆ ಆವರಣದಲ್ಲಿ ಯೋಗ ದಿನಾಚರಣೆಯ ಮಾಹಿತಿಯನ್ನು ಮಾಧ್ಯಮಗಳ ನೀಡುವ ಮುನ್ನವೇ ಇಬ್ಬರು ಬಿಜೆಪಿ ನಾಯಕರ ಜಟಾಪಟಿ ನಡೆದಿದೆ.

ಇದನ್ನು ಓದಿ -ಎಳನೀರು ವ್ಯಾಪಾರದಲ್ಲಿ ನಷ್ಟ : ಮದ್ದೂರಿನಲ್ಲಿ ATM ನಿಂದ 20 ಲಕ್ಷ ಲಪಟಾಯಿಸಿದ್ದ ಯುಪಿ ವ್ಯಕ್ತಿ ಬಂಧನ

ಪ್ರಧಾನಿಯೊಂದಿಗೆ ಪಾಲ್ಗೊಳ್ಳುವ ಯೋಗಪಟುಗಳ ಸಂಖ್ಯೆ ವಿಚಾರದಲ್ಲಿ ದ್ವಂದ್ವವಾಗಿದೆ ಕಾರ್ಯಕ್ರಮದಲ್ಲಿ 7 ರಿಂದ 8 ಸಾವಿರ ಜನರು ಭಾಗವಹಿಸುತ್ತಾರೆ ಎಂದ ಪ್ರತಾಪ್ ಸಿಂಹ ಹೇಳಿದರು ಆಗ ಮಧ್ಯ ಪ್ರವೇಶಿಸಿದ ರಾಮದಾಸ್ ಈಗಾಗಲೇ 13 ಸಾವಿರ ನೋಂದಣಿ ಆಗಿದೆ ಎಂದರು.

ಈ ವೇಳೆ ಕೋಪಗೊಂಡ ಪ್ರತಾಪ್ ಸಿಂಹ ಅವರು ನಾನು ಮಾತನಾಡುತ್ತಿದ್ದೇನೆ, ರಾಮದಾಸ್‍ಜೀ ಸುಮ್ಮನಿರಬೇಕು ಎಂದು ಸಿಡಿಮಿಡಿಗೊಂಡರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮದಾಸ್ ಅವರು, ಪ್ರತಾಪ್ ಅವರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಹಾಗಾಗಿ ವಿವರಣೆ ನೀಡಲು ಯತ್ನಿಸಿದೆ. ನಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂದು ಸ್ಪಷ್ಟನೆ ನೀಡಿದರು.

error: Content is protected !!