ಎಳನೀರು ವ್ಯಾಪಾರದಲ್ಲಿ ನಷ್ಟ : ಮದ್ದೂರಿನಲ್ಲಿ ATM ನಿಂದ 20 ಲಕ್ಷ ಲಪಟಾಯಿಸಿದ್ದ ಯುಪಿ ವ್ಯಕ್ತಿ ಬಂಧನ

Team Newsnap
1 Min Read
UP guy robs 20 lakh from Maddur ATM

ಮಂಡ್ಯದ ಎಟಿಎಂ ಕಳ್ಳ ಉತ್ತರಪ್ರದೇಶದಲ್ಲಿ ಅರೆಸ್ಟ್ ಮಂಡ್ಯ ಜಿಲ್ಲೆಯ ಮದ್ದೂರಿನ ಎಟಿಎಂವೊಂದರಲ್ಲಿ ಲಕ್ಷಾಂತರ ಹಣ ಕದ್ದಿದ್ದ ಕಳ್ಳನೋರ್ವನನ್ನು ಉತ್ತರಪ್ರದೇಶದಲ್ಲಿ ಪೋಲಿಸರು ಬಂಧಿಸಿದ್ದಾರೆ.

ಇದನ್ನು ಓದಿ –ರಾಜ್ಯದಲ್ಲಿ ಮತ್ತೆ ಭೂಗತ ಲೋಕದ ಸದ್ದು- ನಟಿ ಅನುಷ್ಕಾ ಅಣ್ಣನ ಕೊಲೆಗೆ ಸಂಚು ?

ಕಳೆದ ಏಪ್ರಿಲ್ 11ರಂದು ಮದ್ದೂರಿನ ಮೈಸೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ  ಕೆಎಸ್‌ಆರ್‌ಸಿ ಬಸ್ ಡಿಪೋ ಪಕ್ಕದಲ್ಲಿರುವ ಎಸ್‍ಬಿಐನ ಎಟಿಎಂನಲ್ಲಿ ಆರೋಪಿ ಮತ್ತು ಗ್ಯಾಂಗ್ ಸಿಸಿಟಿವಿ ನಾಶ ಮಾಡಿ ಗ್ಯಾಸ್ ಕಟರ್‌ನಿಂದ ಎಟಿಎಂನಲ್ಲಿದ್ದ 20,62, 800 ರು ಕದ್ದು ಖದೀಮರು ಪರಾರಿಯಾಗಿದ್ದರು.

ಈ ಪ್ರಕರಣದ ತನಿಖೆ ನಡೆಸಲು ಮಂಡ್ಯ ಎಸ್‍ಪಿ ಯತೀಶ್, ಮದ್ದೂರು ಸರ್ಕಲ್ ಇನ್ಸ್‌ಪೆಕ್ಟರ್ ಹರೀಶ್ ನೇತೃತ್ವದಲ್ಲಿ 8 ಮಂದಿಯ ತಂಡವನ್ನು ರಚಿಸಿದ್ದರು.

ನಂತರ ಕಾರ್ಯಾಚರಣೆಗಿಳಿದ ಪೊಲೀಸರ ತಂಡಕ್ಕೆ ಎಟಿಎಂ ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸ್ವಿಫ್ಟ್ ಕಾರೊಂದು ಬಹಳ ಹೊತ್ತಿನಿಂದ ನಿಂತಿರುವುದನ್ನುದು ಕಂಡಿದ್ದಾರೆ. ಕಾರು ಮದ್ದೂರಿನ ಎಳನೀರು ಮಾರ್ಕೆಟ್ ಹಿಂದಿರುವ ಬಡಾವಣೆಗೆ ಹೋಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದರು

ನಂತರ ಕಾರು ಇದ್ದ ಮನೆ ಬಳಿ ವಿಚಾರಿಸಿದಾಗ ಎಳನೀರು ವ್ಯಾಪಾರಿಯೊಬ್ಬರಿಗೆ ಬಾಡಿಗೆ ಮನೆ ನೀಡಲಾಗಿತ್ತು. ಅವರು ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಬಾಡಿಗೆ ಪಾವತಿ ಮಾಡಿದ್ದ ಫೋನ್ ನಂಬರ್ ಪತ್ತೆ ಹಚ್ಚಿದ ಪೊಲೀಸರು, ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ಆರೋಪಿ ದೀಪಕ್ ಕುಮಾರ್‍ ನನ್ನು ಬಂಧಿಸಿದ್ದಾರೆ.

ಎಳನೀರು ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರಿಂದ ನಾಲ್ವರೊಂದಿಗೆ ಸೇರಿ ಎಟಿಎಂ ಲೂಟಿ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿಗಳಲ್ಲಿ ಇಬ್ಬರು ಉತ್ತರ ಪ್ರದೇಶದವರು ಮತ್ತು ಇನ್ನಿಬ್ಬರು ಹರಿಯಾಣದವರಾಗಿದ್ದಾರೆ.

ಮತ್ತಷ್ಟು ತನಿಖೆ ನಡೆದಿದೆ

Share This Article
Leave a comment