MBBS ಗಾಗಿ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಯಾಕೆ ಹೋಗ್ತಾರೆ? ಡಿಟೇಲ್ಸ್ ಓದಿ

Team Newsnap
1 Min Read

ಭಾರತೀಯರು ಸೇರಿ ವಿಶ್ವದಲ್ಲೇ ಹೆಚ್ಚಿನ ವಿದ್ಯಾರ್ಥಿಗಳು (MBBS) ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್, ರಷ್ಯಾಗೆ ಯಾಕೆ ಹೋಗುತ್ತಾರೆ ಗೊತ್ತೆ?

ಉನ್ನತ ಶಿಕ್ಷಣ ನೀಡುವಲ್ಲಿ ಭಾರತವೂ ಖ್ಯಾತಿ ಹೊಂದಿರುವಾಗ ಸಾವಿರಾರು ವಿದ್ಯಾರ್ಥಿಗಳು ಏಕೆ ರಷ್ಯಾ ಮತ್ತು ಉಕ್ರೇನ್‍ಗೆ ಮೆಡಿಕಲ್ ಮಾಡಲು ಹೋಗುತ್ತಾರೆ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಬರುವುದು ಸಹಜವಾಗಿದೆ.

ಭಾರತದಲ್ಲಿ ಸರ್ಕಾರಿ ಕೋಟಾದಡಿ ಸೀಟು ಸಿಕ್ಕವರು ಮೆಡಿಕಲ್ ಶಿಕ್ಷಣವನ್ನು ಸುಲಭವಾಗಿ ಪಡೆಯಬಹುದು. ಒಂದು ವೇಳೆ ಸಿಗದಿದ್ದರೆ ಖಾಸಗಿ ಕಾಲೇಜು ಕೇಳಿದಷ್ಟು ಹಣ ಕಟ್ಟಿ ಓದಬೇಕಾಗುತ್ತೆ. ಆದರೆ ಎಲ್ಲ ಜನರು ಸ್ಥಿತಿವಂತರಾಗಿರುವುದಿಲ್ಲ.

ಭಾರತಕ್ಕೆ ಹೋಲಿಸಿದರೆ ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಶುಲ್ಕ ಬಹಳ ಕಡಿಮೆ ಇರುತ್ತೆ. ಇಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಶೇ.60 ರಿಂದ 70ರಷ್ಟು ಕಡಿಮೆ ಅಗ್ಗದಲ್ಲಿ ಶುಲ್ಕವಿರುತ್ತದೆ.

ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡರೆ ಉಕ್ರೇನ್ ನಲ್ಲಿ ಸೀಟ್ ಪಡೆಯುವುದು ಸುಲಭದ ಕೆಲಸ.

ಭಾರತಕ್ಕೆ ಹೋಲಿಸಿದರೆ ಉಕ್ರೇನ್‍ನಲ್ಲಿ ಜೀವನ ನಿರ್ವಹಣೆ ವೆಚ್ಚವೂ ಕಡಿಮೆ ಇರುತ್ತೆ.

ಇದರ ಜೊತೆಗೆ ಇಲ್ಲಿನ ವೈದ್ಯಕೀಯ ಕಾಲೇಜುಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಯುನೆಸ್ಕೊ
ಯುರೋಪಿಯನ್ ದೇಶಗಳ ಮಾನ್ಯತೆ ಇದೆ.

ಉಕ್ರೇನ್ ನಲ್ಲಿ ವಿದ್ಯಾರ್ಥಿಗಳ ಜೀವನ ವೆಚ್ಚ ಅಗ್ಗವಾಗಿರುವುದರಿಂದ ಇಲ್ಲಿಗೆ ಎಷ್ಟೋ ಜನರು ಶಿಕ್ಷಣ ಪಡೆಯಲು ಬರುತ್ತಾರೆ.

ಉಕ್ರೇನ್‍ನಲ್ಲಿ 20,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಇದ್ದು, ಅವರನ್ನು ರಕ್ಷಿಸಲು ಭಾರತವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಸದ್ಯಕ್ಕೆ ಉಕ್ರೇನ್‍ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯಿಂದಾಗಿ ನವದೆಹಲಿ ಮತ್ತು ಕೀವ್ ನಡುವಿನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಯುದ್ದದ ರಣರಂಗ ಉಕ್ರೇನ್ ನಲ್ಲಿ ಸಿಲುಕಿರುವ 137 ಕನ್ನಡಿಗರು

Share This Article
Leave a comment