ಉಕ್ರೇನ್​​ನಲ್ಲಿ ಘೋರ ಪರಿಸ್ಥಿತಿ : ಪ್ರತಿ 20 ನಿಮಿಷಕ್ಕೊಂದು ಸ್ಫೋಟ

Team Newsnap
1 Min Read

ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಮೇಲೆ, ಅಲ್ಲಿನ ಪರಿಸ್ಥಿತಿ ಘೋರವಾಗಿದೆ.

ವಾಯು ಸೇನೆಯ ದಾಳಿಯ ಜೋರಾದ ಸದ್ದು, ಭೀಕರ ಸ್ಫೋಟಗಳು, ಮಿಸೈಲ್​​ಗಳ ದಾಳಿ ನಿರಂತರವಾಗಿ ನಡೆಯುತ್ತಲೇ ಇವೆ. ಉಕ್ರೇನ್​​ನ ನಾಗರಿಕರ ಪರಿಸ್ಥಿತಿ ಶೋಚನೀಯವಾಗಿದೆ.

ಉಕ್ರೇನ್ ನಾಗರಿಕರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದು, ಮೆಟ್ರೋ ಸ್ಟೇಷನ್, ಬಾಂಬ್ ಶೆಲ್ಟರ್​ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ರಷ್ಯಾ ಬಾಂಬ್ ದಾಳಿ ನಡೆಸಿದರೂ ಹಾನಿಯಾಗ ಬಾರದು ಎಂದು ಉಕ್ರೇನ್ ರಾಜಧಾನಿ ಕೀವ್​​ನಲ್ಲಿ ಸ್ಪೆಷಲ್ ಶೆಲ್ಟರ್​ ನಿರ್ಮಾಣ ಮಾಡಲಾಗಿದೆ.

ಅಲ್ಲಿ ಸಾಕಷ್ಟು ಮಂದಿ ಆಶ್ರಯ ಪಡೆದುಕೊಂಡಿದ್ದಾರೆ.
ಕೆಲವು ಗ್ರೌಂಡ್ ರಿಪೋರ್ಟ್​​ಗಳ ಪ್ರಕಾರ, ಪ್ರತಿ 20 ನಿಮಿಷಕ್ಕೆ ಒಂದರಂತೆ ಬಾಂಬ್ ದಾಳಿ ಮಾಡುತ್ತಿದೆ. ಇಂದು ಬೆಳಗ್ಗೆ ಒಂದು ಬಿಲ್ಡಿಂಗ್ ಅನ್ನ ನೆಲಸಮ ಮಾಡಿದೆ. ಬಾಂಬ್ ದಾಳಿಯಿಂದಾಗಿ ಅಲ್ಲಲ್ಲಿ ಬೆಂಕಿಯ ಚೆಂಡುಗಳು ಕಾಣಿಸಿಕೊಳ್ಳುತ್ತಿದೆ. 9 ಅಂತಸ್ತಿನ ಕಟ್ಟಡ ಒಂದರ ಮೇಲೆ ರಷ್ಯಾದ ವಿಮಾನವೊಂದು ಪತನಗೊಂಡಿದೆ.

Share This Article
Leave a comment