ಯುದ್ದದ ರಣರಂಗ ಉಕ್ರೇನ್ ನಲ್ಲಿ ಸಿಲುಕಿರುವ 137 ಕನ್ನಡಿಗರು

Team Newsnap
1 Min Read

ರಷ್ಯಾ, ಉಕ್ರೇನ್ ಮೇಲೆ ಯುದ್ದ ಆರಂಭಿಸಿದ ನಂತರ ಅಲ್ಲಿನ ಕನ್ನಡಿಗರ ಪಾಡು ಹೇಳ ತೀರದ್ದಾಗಿದೆ.

ಯುದ್ದದ ಭೀಕರತೆಯ ನಡುವೆಯೇ ಸಿಲುಕಿಕೊಂಡಿರುವ 137 ಕನ್ನಡಿಗರನ್ನು ರಕ್ಷಣೆ ಮಾಡಬೇಕಿದೆ. ಮೈಸೂರು 14 , ಬಾಗಲಕೋಟೆ 14 , ಬೆಂಗಳೂರು 17 ದಾವಣಗೆರೆ ಹಾಗೂ ಕೊಡಗಿನ 4 ಸೇರಿದಂತೆ ರಾಜ್ಯದಾದ್ಯಂತ 20 ಜಿಲ್ಲೆಗಳ 137 ಮಂದಿಯನ್ನು ರಕ್ಷಣೆ ಮಾಡಬೇಕಾಗಿದೆ.

ಉಕ್ರೇನ್​ನಲ್ಲಿ ಸಿಲುಕಿರುವ ಬಾಗಲಕೋಟೆ ಜಿಲ್ಲೆಯ 14 ವಿದ್ಯಾರ್ಥಿಗಳನ್ನು ಜಿಲ್ಲೆಗೆ ಸುರಕ್ಷಿತವಾಗಿ ಕರೆತರುವಂತೆ ಐಎಫ್‌ಎಸ್ ಅಧಿಕಾರಿ ಡಾ.ಮನೋಜ್ ರಾಜನ್​ಗೆ ಜಿಲ್ಲಾಧಿಕಾರಿ ಕ್ಯಾ.ಕೆ. ರಾಜೇಂದ್ರ ಮನವಿ ಮಾಡಿದ್ದಾರೆ.

ಕಾರ್ಕೆವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿ ವಿದ್ಯಾರ್ಥಿಗಳೆಲ್ಲ ಎಂಬಿಬಿಎಸ್ ಓದುವ ಸಲುವಾಗಿ ಅಲ್ಲಿಗೆ ಹೋಗಿದ್ದರು .

ಸದ್ಯ ದೇಶಕ್ಕೆ ಮರಳುವ ಮುನ್ನವೇ ಯುದ್ಧ ಆರಂಭವಾಗಿದೆ. ಹೀಗಾಗಿ ಉಕ್ರೇನ್​​ನ ಮೆಟ್ರೋ ಸ್ಟೇಷನ್​ ಸುರಂಗದಲ್ಲಿ ಅಡಗಿ ಕೂತಿದ್ದಾರೆ

ಬಾಗಲಕೋಟೆ ನಗರದ ಮನೋಜ್ ಚಿತ್ರಗಾರ, ಅಪೂರ್ವ ಕದಾಂಪುರ, ಪ್ರಸಾದಪ್ರಕಾಶ್ ಬಂಗಾರಶೆಟ್ಟಿ, ರಬಕವಿ ನಗರದ ಆಶ್ವತ್ ಗಂಗಪ್ಪ ಗುರವ, ಜಗದಾಳ ಗ್ರಾಮದ ಕಿರಣ ಸಿಂಗಾಡಿ, ನಾವಲಗಿ ಗ್ರಾಮದ ಕಿರಣ ಲಕ್ಷ್ಮಣ ಸವದಿ, ಬಾಗಲಕೋಟೆ ತಾಲೂಕಿನ ಸೀಮಿಕೇರಿ ಗ್ರಾಮದ ಸ್ಫೂರ್ತಿ ದೊಡ್ಮನಿ, ಜಿಲ್ಲೆಯ ಶುಷ್ಮಾ ನ್ಯಾಮಗೌಡ, ರೋಹಿತ್ ಹಿಪ್ಪರಗಿ, ಅನಿಕೇತ್ ಶೀಪರಮಟ್ಟಿ, ಪ್ರಜ್ವಲ ಹಿಪ್ಪರಗಿ, ಚೇತನಾ ಶ್ರೀಶೈಲ ಮಾಗಿ, ಸಹನಾ ಮಲ್ಲನಗೌಡ ಪಾಟೀಲ, ಅಶ್ವನಿ ಶಿವಾಜಿ ಯಾದವಾಡ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕುಟುಂಬಗಳಲ್ಲಿ ಆತಂಕ ಶುರುವಾಗಿದೆ.

Share This Article
Leave a comment