ಕಾಶ್ಮೀರಿ ಪಂಡಿತರ ಮೇಲೆ ದೌರ್ಜನ್ಯ ನಡೆದಿದ್ದರೆ ಜೈ ಶ್ರೀರಾಂ ಎಂದು ಮುಸ್ಲಿಂಗೆ ಹೊಡೆದರೆ ದೌರ್ಜನ್ಯ ಅಲ್ಲವೆ – ಸಾಯಿ ಪಲ್ಲವಿ

Team Newsnap
1 Min Read
Violence against Kashmiri Pandits protest- Sai Pallavi #thenewsnap #kannadanews #kashmir #sail_pallavi #attack #jai_sriram #latestnews #kashmir_pandit

ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ಕಾಶ್ಮೀರಿ ಪಂಡಿತರು ಹೇಗೆ ಕೊಲ್ಲಲ್ಪಟ್ಟರು ಎಂಬುದನ್ನು ನಿರ್ಮಾಪಕರು ತೋರಿಸಿದ್ದಾರೆ. ಕೊರೊನಾ ಸಮಯದಲ್ಲಿ.. ಈ ವಿಚಾರವನ್ನು ನಾವು ಧಾರ್ಮಿಕ ಸಂಘರ್ಷವಾಗಿ ತಗೊಂಡ್ರೆ, ಇತ್ತೀಚೆಗೆ ಯಾರೋ ಹಸುವನ್ನು ಗಾಡಿಯಲ್ಲಿ ಸಾಗಿಸುತ್ತಿದ್ದರು ಆ ಗಾಡಿಯನ್ನು ಮುಸ್ಲಿಮರು ಓಡಿಸುತ್ತಿದ್ದರು ಅಂತ ಕೆಲವರು ಆ ವ್ಯಕ್ತಿಗೆ ಹೊಡೆದು ಜೈ ಶ್ರೀರಾಮ್ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಹಾಗಾದರೆ ಪಂಡಿತರ ಹತ್ಯೆಗೂ, ವ್ಯಕ್ತಿಯ ಮೇಲಿನ ಹಲ್ಲೆಗೂ ವ್ಯತ್ಯಾಸ ಎಲ್ಲವೆ? ಎಂದು ನಟಿ ಸಾಯಿ ಪಲ್ಲವಿ ಪ್ರಶ್ನೆ ಮಾಡಿದ್ದಾರೆ

ಇದನ್ನು ಓದಿ –ದಕ್ಷಿಣ ಪದವೀಧರ ಕ್ಷೇತ್ರ : ಮಧುಗೆ 5902 ಮತಗಳ ಮುನ್ನಡೆ – 11ಗಂಟೆ ವೇಳೆಗೆ ಫಲಿತಾಂಶ ನಿರೀಕ್ಷೆ

ಸದ್ಯ ಸಾಯಿ ಪಲ್ಲವಿ ಹೇಳಿಕೆಗೆ ಸಾಮಾಜಿಕ ಜಾಲಾತಣದಲ್ಲಿ ತೀವ್ರ ಪರ-ವಿರೋಧ ವ್ಯಕ್ತವಾಗ್ತಿದೆ. ಕೆಲವರು ಸಾಯಿ ಪಲ್ಲವಿ ಹೀಗೆ ಹೇಳಲು ಧೈರ್ಯ ಬೇಕು ಅಂದ್ರೆ ಇನ್ನು ಕೆಲವರು ಕಾಶ್ಮೀರ ನರವೇಧಕ್ಕೂ ಗೋಕಳ್ಳರ ಹತ್ಯೆಗೂ ಹೋಲಿಕೆ ಮಾಡಬೇಡಿ ಎಂದು ಕಿಡಿಕಾರಿದ್ದಾರೆ. ಆದ್ರೆ ವಿವಾದಾತ್ಮಕ ಹೇಳಿಕೆ ಬಗ್ಗೆ ಸಾಯಿ ಪಲ್ಲವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚೆಗಷ್ಟೆ ತಮ್ಮ ಸಿನಿಮಾದ ಕನ್ನಡ ಅವತರಣಿಕೆಗೆ ಸ್ವತಃ ಕನ್ನಡದಲ್ಲಿ ಡಬ್ಬಿಂಗ್​ ಮಾಡಿ ಕನ್ನಡಿಗರ ಮೆಚ್ಚುಗೆಗೆ ಸಾಯಿ ಪಲ್ಲವಿ ಪಾತ್ರರಾಗಿದ್ದರು. ಆದ್ರೆ ಈಗ ನೀಡಿದ ಒಂದು ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದಾರೆ. ಇದು ವಿರಾಟ ಪರ್ವಂ ಸಿನೆಮಾ ಮೇಲೆ ಜನರ ಆಕ್ರೋಶ ವಿರಾಟ ರೂಪ ಪಡೆಯುವಂತೆ ಮಾಡಿದ್ದು ಚಿತ್ರದ ಮೇಲೂ ಪ್ರಭಾವ ಬೀರುತ್ತಾ ನಾಳೆ ಗೊತ್ತಾಗಲಿದೆ.

Share This Article
Leave a comment