ಮಣ್ಣಿದ್ದರೆ ಮಾತ್ರ ಮಾನವ ಬದುಕಬಲ್ಲ – ಜಗ್ಗಿ ವಾಸುದೇವ್

Team Newsnap
1 Min Read

ಮಣ್ಣಿದ್ದರೆ ಮಾತ್ರ ಮಾನವ ಬದುಕಬಲ್ಲ. ಮಣ್ಣಿನಿಂದಲೇ ಸರ್ವಸ್ವ’ ಎಂದು ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟರು.

ಇದನ್ನು ಓದಿ –ಕಾಶ್ಮೀರಿ ಪಂಡಿತರ ಮೇಲೆ ದೌರ್ಜನ್ಯ ನಡೆದಿದ್ದರೆ ಜೈ ಶ್ರೀರಾಂ ಎಂದು ಮುಸ್ಲಿಂಗೆ ಹೊಡೆದರೆ ದೌರ್ಜನ್ಯ ಅಲ್ಲವೆ – ಸಾಯಿ ಪಲ್ಲವಿ

ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರದಲ್ಲಿ ಬುಧವಾರ ಈಶಾ ಫೌಂಡೇಶನ್ ವತಿಯಿಂದ ನಡೆದ ಬೈಕ್ ಯಾತ್ರೆಯ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ‘ಗಿಡ-ಮರಗಳನ್ನು ಬೆಳೆದು ಪರಿಸರ ಸಂರಕ್ಷಿಸಿ ಮಣ್ಣು ಇಲ್ಲದಿದ್ದರೆ ಮರಗಳು ಬೆಳೆಯುವುದು ಹೇಗೆ? ಹಸಿರು ಇಲ್ಲದಿದ್ದರೆ ಆಮ್ಲಜನಕ ಇಲ್ಲವಾಗಿ ಉಸಿರು‌ ನಿಲ್ಲುತ್ತದೆ. ಎಲ್ಲದಕ್ಕೂ ಮಣ್ಣೇ ಆಧಾರ’ ಎಂದರು.

ಮೊದಲು ರಸಗೊಬ್ಬರ ಬಳಸದ ಕಾರಣ ಮಣ್ಣು ಫಲವತ್ತಾಗಿ‌ರುತ್ತಿತ್ತು. ಎರೆಹುಳು, ಇತರೆ ಉಪಯೋಗಿ ಜೀವಿಗಳು ಬೆಳೆದು ಮಣ್ಣಿನಲ್ಲಿ ಎಲ್ಲ ತರದ ಪೌಷ್ಟಿಕಾಂಶ ಇರುತ್ತಿತ್ತು. ಕಾಲ ಕ್ರಮೇಣ ಮಣ್ಣಿನಲ್ಲಿ ಜೀವ ಇಲ್ಲದಂತಾಗುತ್ತಿದೆ’ ಎಂದರು. ‘ಮಣ್ಣಿನ ಸಂರಕ್ಷಣೆ ಮಾಡುವುದಕ್ಕಾಗಿ ನಾನು ಬೈಕ್ ಮೇಲೆ ಲಂಡನ್‌ನಿಂದ ಯಾತ್ರೆ ಆರಂಭಿಸಿ 3000 ಕಿ.ಮೀ ಕ್ರಮಿಸಿ ಕರ್ನಾಟಕ ಪ್ರವೇಶಿಸಿದ್ದೇನೆ’ ಎಂದರು.

sadguru

ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ರಾಜಶೇಖರ ಪಾಟೀಲ, ಶರಣು ಸಲಗರ, ವಿಧಾನಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ಗುಂಡುರೆಡ್ಡಿ, ಶಿವರಾಜ‌ ನರಶೆಟ್ಟಿ, ಸಿದ್ದು ಪಾಟೀಲ, ಮುಗುಳಖೋಡ ಮುರುಘರಾಜೇಂದ್ರ ಸ್ವಾಮೀಜಿ, ಯಳಸಂಗಿ ಪರಮಾನಂದ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ ಪಾಲ್ಗೊಂಡಿದ್ದರು.

ಮಣ್ಣು ರಕ್ಷಿಸುವ ಬಗ್ಗೆ ಅರಿವು ಮೂಡಿಸುತ್ತಾ 26 ರಾಷ್ಟ್ರಗಳನ್ನು ಏಕಾಂಗಿಯಾಗಿ ಬೈಕ್‌ನಲ್ಲಿ ಸುತ್ತಾಡಿ ಬಂದಿರುವ ಸದ್ಗುರು ಮಣ್ಣು ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು. ಸದ್ಗುರು ಅವರು ಜೂ. 19ರಂದು ಬೆಂಗಳೂರು ಮತ್ತು ಮೈಸೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Share This Article
Leave a comment