ದಕ್ಷಿಣ ಪದವೀಧರ ಕ್ಷೇತ್ರ : ಮಧುಗೆ 5905 ಮತಗಳ ಮುನ್ನಡೆ – 11ಗಂಟೆ ವೇಳೆಗೆ ಫಲಿತಾಂಶ ನಿರೀಕ್ಷೆ

Team Newsnap
1 Min Read
Run-up-the-river project at Shivanasamudra ಶಿವನಸಮುದ್ರದಲ್ಲಿ ರನ್-ಆಪ್-ದಿ-ರಿವರ್ ಯೋಜನೆ #RunUpTheRiver #Shivanasamudra #Project #news

ದಕ್ಷಿಣ ಪದವೀಧರರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಧು ಜಿ ಮಾದೇಗೌಡರು ಮೊದಲ ಪ್ರಾಶಸ್ತ್ಯ ಮತದಲ್ಲಿ 5905 ಮತ ಪಡೆದು ಗೆಲುವಿನ ಹಾದಿಯನ್ನು ಸುಗಮ ಮಾಡಿಕೊಂಡಿದ್ದಾರೆ.

ಮೊದಲ ಪ್ರಶಸ್ತ್ಯ ಮತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ‌ ಮಾದೇಗೌಡಗೆ 5905 ಸಾವಿರ ಮತಗಳ ಲೀಡ್ ಬಂದಿವೆ. ದಕ್ಷಿಣದ ಪದವೀಧರ ಚುನಾವಣೆಯಲ್ಲಿ ದಾಖಲೆ ಬರೆಯಲು ಮುಂದಾದ ಕಾಂಗ್ರೆಸ್ ದಕ್ಷಿಣ ಪದವೀಧರ ಚುನಾವಣೆಯಲ್ಲಿ ಇದೇ ಮೊದಲಬಾರಿಗೆ ಖಾತೆ ತೆರೆಯಲಿದೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಸಿದ್ದರಾಮಯ್ಯಗೆ ಹೆಚ್ಚಲಿರುವ ವರ್ಚಸ್ಸು.10 ಅಥವಾ 11 ಗಂಟೆ ವೇಳೆಗೆ ಅಂತಿಮ ಫಲಿತಾಂಶ ಸಾಧ್ಯತೆ. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯರಾತ್ರಿಯಿಡಿ ನಡೆದಿದೆ.

ಮೊದಲನೇ ಪ್ರಾಶಸ್ತ್ಯದ ಮತ ಎಣಿಕೆ ಕಾರ್ಯ ಅಂತ್ಯಗೊಂಡಿದೆ, ಎರಡನೇ ಪ್ರಾಶಸ್ತ್ಯ ಮತ ಏಣಿಕೆಯಲ್ಲೂ
7318ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಮಧು ಮುನ್ನಡೆ ಸಾಧಿಸಿದ್ದಾರೆ ಎಂಬ ಮಾಹಿತಿ ಇದೆ.

ಒಟ್ಟು ಚಲಾವಣೆಯಾದ ಮತಗಳು-99621,
ತಿರಸ್ಕೃತಗೊಂಡ ಮತಗಳು-7302,

ಅಭ್ಯರ್ಥಿಯು ಗೆಲ್ಲಲು ನಿಗದಿಯಾಗಿರುವ ಮತಗಳು-46,600%.

ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದವರ ವಿವರ

  • ಮಧು ಜಿ,ಮಾದೇಗೌಡ-32592
  • ರವಿಶಂಕರ್-26687
  • ಹೆಚ್ ಕೆ ರಾಮು-17022
  • ಪ್ರಸನ್ನ ಎನ್ ಗೌಡ-6609,
  • ವಿನಯ್-3472
  • ಚೆನ್ನಕೇಶವ ಮೂರ್ತಿ-2621,

ಮೊದಲನೇ ಪ್ರಾಶಸ್ತ್ಯದ ಮತದಲ್ಲಿ ಯಾರು ಕೂಡ ನಿಗದಿಪಡಿಸಿರುವ ಮತಗಳನ್ನು ಪಡೆದಿಲ್ಲದಿರುವುದರಿಂದ ಎರಡನೇ ಪ್ರಾಶಸ್ತ್ಯದ ಮತಎಣಿಕೆ ಕಾರ್ಯ ಪ್ರಾರಂಭವಾಗಿದೆ.

Share This Article
Leave a comment