ಹಿಂದಿ ಕಿರುತೆರೆ ನಟಿ ವೈಶಾಲಿ ಠಕ್ಕರ್ (26) ಮಧ್ಯಪ್ರದೇಶದ ಇಂದೋರ್ನಲ್ಲಿರುವ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮುರುಘಾ ಮಠಕ್ಕೆ ನೂತನ ಪೀಠಾಧ್ಯಕ್ಷರಾಗಿ ಬಸವ ಪ್ರಭು ಶ್ರೀಗಳ ಆಯ್ಕೆ – ಜಿತೇಂದ್ರ
ವೈಶಾಲಿ ಅವರು ತಂದೆ ಮತ್ತು ಸಹೋದರನೊಂದಿಗೆ ಇಂದೋರ್‌ನಲ್ಲಿ ನೆಲೆಸಿದ್ದರು. ಘಟನಾ ಸ್ಥಳದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದ್ದು, ಘಟನೆಗೆ ಸಂಬಂಧಿಸಿ ತೇಜಾಜಿ ನಗರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹಿಂದಿ ಕಿರುತೆರೆಯಲ್ಲಿ ವೈಶಾಲಿ ಸಾಕಷ್ಟು ಖ್ಯಾತಿ ಗಳಿಸಿದ್ದರು. ಸಸುರಾಲ್ ಸಿಮರ್ ಕಾ’ ಧಾರಾವಾಹಿಯಲ್ಲಿ ಅವರು ಅಂಜಲಿ ಭಾರದ್ವಾಜ್ ಎಂಬ ಪಾತ್ರ ಮಾಡಿದ್ದರು.
ಯೇ ರಿಷ್ತಾ ಕ್ಯಾ ಕೆಹಲಾತಾ ಹೈ’, ʻರಕ್ಷಾ ಬಂಧನ್ʼ ಮುಂತಾದ ಧಾರಾವಾಹಿಗಳಲ್ಲಿ ವೈಶಾಲಿ ಠಕ್ಕರ್ ನಟಿಸಿದ್ದರು. `ಬಿಗ್ ಬಾಸ್’ಮೂಲಕ ನಟಿ ಮೋಡಿ ಮಾಡಿದ್ದರು.
‘ಸಸುರಾಲ್ ಸಿಮರ್ ಕಾ’ ಧಾರಾವಾಹಿ ಮೂಲಕ ಹಿಂದಿ ಕಿರುತೆರೆಗೆ ಕಾಲಿಟ್ಟ ವೈಶಾಲಿ, ಸಾಕಷ್ಟು ಖ್ಯಾತಿ ಗಳಿಸಿದ್ದರು. ‘ಸೂಪರ್ ಸಿಸ್ಟರ್ಸ್’, ‘ಮನಮೋಹಿನಿ 2’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಇತ್ತೀಚೆಗೆ ‘ಯೇ ರಿಷ್ತಾ ಕ್ಯಾ ಕೆಹಲಾತಾ ಹೈ’, ‘ಯೇ ಹೈ ಆಶಿಕಿ’, ‘ರಕ್ಷಾ ಬಂಧನ್’ ಮುಂತಾದ ಧಾರಾವಾಹಿಗಳಲ್ಲಿ ವೈಶಾಲಿ ನಟಿಸಿದ್ದರು.
ವೈಶಾಲಿ ನಿಧನದಿಂದಾಗಿ ಕುಟುಂಬಸ್ಥರು ದುಃಖತಪ್ತರಾಗಿದ್ದಾರೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
More Stories
ಬಿಗ್ ಬಾಸ್ ತೆಲುಗು ಗೆದ್ದ ಮೈಸೂರಿನ ನಿಖಿಲ್ ಮಳಿಯಕ್ಕಲ್
ವಿಶ್ವದಾಖಲೆ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ವಿಧಿವಶ
ಕಾಲ್ತುಳಿತದಲ್ಲಿ ಮಹಿಳೆ ಸಾವು: ನಟ ಅಲ್ಲು ಅರ್ಜುನ್ ಬಂಧನ