KRS ಸುತ್ತಮುತ್ತ ನಾಳೆ 5 ಗಣಿಗಳಲ್ಲಿ ಟ್ರಯಲ್ ಬ್ಲಾಸ್ಟ್ : ರೈತರ ವಿರೋದಧ ನಡುವೆಯೂ ಪ್ರಾಯೋಗಿಕ ಸಿದ್ಧತೆ

Team Newsnap
1 Min Read

KRS ಸುತ್ತಮುತ್ತ ಗಣಿಗಾರಿಕೆ ಸ್ಥಳದಲ್ಲಿ ನಾಳೆಯಿಂದಲೇ (ಜುಲೈ24) ಟ್ರಯಲ್ ಬ್ಲಾಸ್ಟ್ ಗೆ ಸಿದ್ಧತೆ ನಡೆಸಲಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ನೆಮ್ಮದಿಯಾಗಿದ್ದ ಬೇಬಿ ಬೆಟ್ಟದ ಸುತ್ತಮುತ್ತಲಿನ ಗ್ರಾಮದ ಸ್ಥಳೀಯರಲ್ಲಿ ಮತ್ತೆ ಆತಂಕ ಎದುರಾಗಿದೆ.

ಕೆಆರ್‌ಎಸ್‌ನ 20 ಕಿ.ಮೀ. ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಯಲಿದೆ. ಜಾರ್ಖಂಡ್ ಮೂಲದ ಭೂ ವಿಜ್ಞಾನಿಗಳ ತಂಡದಿಂದ ಬೇಬಿ ಬೆಟ್ಟ ಸೇರಿದಂತೆ ಐದು ಕಡೆ ಟ್ರಯಲ್ ಬ್ಲಾಸ್ಟ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ರೈತರ ವಿರೋಧದ ಇದ್ದೇ ಇದೆ . ಈ ನಡುವೆಯೂ ಟ್ರಯಲ್ ಬ್ಲಾಸ್ಟ್ ಗೆ ಸಿದ್ಧತೆ ನಡೆಯುತ್ತಿದೆ ಇದನ್ನು ವಿರೋಧಿಸಿ ನಾಳೆ ರೈತರಿಂದ ಬೈಕ್ ‌ರ್ಯಾಲಿ ಕೂಡ ನಡೆಸಲಿದ್ದಾರೆ.

ಕೆಆರ್‌ಎಸ್‌ನಿಂದ ಟ್ರಯಲ್ ಬ್ಲಾಸ್ಟ್ ನಡೆಯುವ ಸ್ಥಳದ ವರೆಗೆ ಬೈಕ್ ರ್ಯಾಲಿ ನಡೆಯಲಿದೆ ಬಳಿಕ ಟ್ರಯಲ್ ಬ್ಲಾಸ್ಟಿಂಗ್ ವಿರುದ್ಧ ಗೋ ಬ್ಯಾಕ್ ಚಳುವಳಿ ಹಮ್ಮಿಕೊಳ್ಳಲಾಗಿದೆ.

ಒಂದೇ ನಾಣ್ಯಕ್ಕೆ ಎರಡು ಮುಖಗಳು
(ಬ್ಯಾಂಕರ್ಸ್ ಡೈರಿ)

ಟ್ರಯಲ್ ಬ್ಲಾಸ್ಟ್ ನಡೆಸದಂತೆ ಪ್ರತಿಭಟನೆ ನಡೆಸಲಾಗುತ್ತದೆ. ಪ್ರತಿಭಟನೆಯಲ್ಲಿ ರೈತ ಸಂಘಟನೆ, ಪ್ರಗತಿಪರ ಸಂಘಟನೆ, ಕಾರ್ಮಿಕ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಭಾಗಿಯಾಗಲಿವೆ. 2018 ರಲ್ಲಿ ಟ್ರಯಲ್ ಬ್ಲಾಸ್ಟ್ ಗೆ ಬಂದಿದ್ದ ವೇಳೆ ರೈತರು ಗೋ ಬ್ಯಾಕ್ ಚಳುವಳಿ ನಡೆಸಿದ್ದರು. ಆ ವೇಳೆ ಚಳುವಳಿಗೆ ಸೋತು ಅಧಿಕಾರಿಗಳು ಜಾಗ ಖಾಲಿ ಮಾಡಿದ್ದನ್ನು ಸ್ಮರಿಸಬಹುದು.

Share This Article
Leave a comment