ನೇಹಾ ಹತ್ಯೆ ಪ್ರಕರಣ ಸಿಐಡಿಗೆ ವರ್ಗಾವಣೆ : ರಾಜ್ಯ ಸರ್ಕಾರದಿಂದ ಘೋಷಣೆ

Team Newsnap
1 Min Read

ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ , ಹುಬ್ಬಳ್ಳಿಯ ನೇಹಾ ಹಿರೇಮಠ (Neha Hiremath) ಅವರ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ತಿಳಿಸಿದ್ದಾರೆ.

ಶಿವಮೊಗ್ಗದ ತರೀಕೆರೆಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ತೆರಳಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ,ಶೀಘ್ರದಲ್ಲಿ ನೇಹಾಳ ಹತ್ಯೆ ಕೇಸ್‌ ಅನ್ನು ಸಿಐಡಿ ಅಧಿಕಾರಿಗಳು ನಡೆಸಲಿದ್ದು ,ಇದಕ್ಕಾಗಿ ವಿಶೇಷ ಕೋರ್ಟ್ (Special Court) ಅನ್ನು ರಚಿಸುತ್ತೇವೆ ಎಂದು ಹೇಳಿದ್ದಾರೆ.

ನೇಹಾ ಅವರ ಮನೆಗೆ ನಾನು ಹೋಗಲು ಆಗಿಲ್ಲ. ನಮ್ಮ ಸಚಿವರು, ಕಾರ್ಯಕರ್ತರು ಅವರ ಮನೆಗೆ ಹೋಗಿದ್ದಾರೆ ಎಂದು ಮಾತನಾಡಿದರು.

neha

ಇದನ್ನು ಓದಿ –ಒಂದೇ ಕುಟುಂಬದ 6 ಮಂದಿ ನೀರಿನ ಪಾಲು

ನೇಹಾಳನ್ನು 9 ಅಲ್ಲ ಬದಲಾಗಿ 14 ಬಾರಿ ಚುಚ್ಚಿ ಕೊಂದಿದ್ದಾನೆ. ನೇಹಾ ಹಿರೇಮಠ ದೇಹದ ಮೇಲೆ 14 ಗಾಯಗಳ ಗುರುತು ಪತ್ತೆಯಾಗಿದೆ ಇದಲ್ಲದೇ ಕುತ್ತಿಗೆಗೆ ಹಲವು ಬಾರಿ ಇರಿದಿದ್ದರಿಂದ ರಕ್ತನಾಳ ತುಂಡಾಗಿ ವಿಪರೀತ ರಕ್ತಸ್ರಾವವಾಗಿದೆ, ಹೀಗಾಗಿ ರಕ್ತಸ್ರಾವದಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದಿದ್ದೆ.

Share This Article
Leave a comment