ಬೆಂಗಳೂರಲ್ಲಿ ದುರಂತ : ಟ್ಯಾಂಕರ್ ಹರಿದು ಪತ್ರಕರ್ತೆ ಸಾವು

Team Newsnap
1 Min Read
Tragedy in Bengaluru: Tanker overturns, journalist dies ಬೆಂಗಳೂರಲ್ಲಿ ದುರಂತ : ಟ್ಯಾಂಕರ್ ಹರಿದು ಪತ್ರಕರ್ತೆ ಸಾವು

ನಿಯಂತ್ರಣ ತಪ್ಪಿ ಬೈಕ್​ನಿಂದ ಕೆಳಗೆ ಬಿದ್ದ ಮಹಿಳೆಯ ಮೇಲೆ ಗ್ಯಾಸ್ ಟ್ಯಾಂಕರ್ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಫ್ಲೈ ಓವರ್ ಬಳಿ ನಡೆದಿದೆ.

ಸಿ.ಆರ್.ಲತಾ (46) ಮೃತ ದುರ್ದೈವಿ. ಲತಾ ಖಾಸಗಿ ಸುದ್ದಿ ವಾಹಿನಿ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು.ಇದನ್ನು ಓದಿ –20 ಶಾಸಕರ ಜೊತೆ HDK ಹೈದ್ರಾಬಾದ್ ಗೆ ಪಯಣ : ಕೆಸಿಆರ್ ಜೊತೆ ಹೊಸ ಪಕ್ಷ ಸ್ಥಾಪನೆಗೆ ಸಾಥ್

ಲತಾ ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿಯಿಂದ ಬಂದ ಗ್ಯಾಸ್ ಟ್ಯಾಂಕರ್ ಅವರ ಮೇಲೆ ಹರಿದು ಹೋಗಿದೆ.


ಘಟನಾ ಸ್ಥಳಕ್ಕೆ ಆರ್.ಟಿ.ನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಾರಿ ಚಾಲಕ ಸಿದ್ದಿಕ್ ಎಂಬುವವರನ್ನು ಆರ್.ಟಿ.ನಗರ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಆರ್.ಟಿ.ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment