ಕೇರಳದಲ್ಲಿ 873 ಪೊಲೀಸ್‌ ಅಧಿಕಾರಿಗಳಿಗೆ PFI ಜೊತೆ ನಂಟು: ಡಿಜಿಪಿಗೆ NIA ವರದಿ

Team Newsnap
1 Min Read
873 police officers linked to PFI in Kerala: NIA report to DGP ಕೇರಳದಲ್ಲಿ 873 ಪೊಲೀಸ್‌ ಅಧಿಕಾರಿಗಳಿಗೆ PFI ಜೊತೆ ನಂಟು: ಡಿಜಿಪಿಗೆ NIA ವರದಿ

ಕೇರಳದಲ್ಲಿ ಕನಿಷ್ಠ 873 ಪೊಲೀಸ್‌ ಅಧಿಕಾರಿಗಳು ನಿಷೇಧಿತ ಪಿಎಫ್‌ಐ(PFI) ಸಂಘಟನೆಯ ಜೊತೆ ಸಂಬಂಧ ಹೊಂದಿದ್ದಾರೆ

ರಾಷ್ಟ್ರೀಯ ತನಿಖಾ ದಳ(NIA) ಕೇರಳ ರಾಜ್ಯ ಪೊಲೀಸ್‌ ಮುಖ್ಯಸ್ಥರಿಗೆ ಸಲ್ಲಿಸಿದ ವರದಿಯಲ್ಲಿ ಈ ಮಾಹಿತಿ ನೀಡಿದ್ದಾರೆ.ಇದನ್ನು ಓದಿ –ಬೆಂಗಳೂರಲ್ಲಿ ದುರಂತ : ಟ್ಯಾಂಕರ್ ಹರಿದು ಪತ್ರಕರ್ತೆ ಸಾವು

ಸಬ್‌ ಇನ್ಸ್‌ಪೆಕ್ಟರ್‌, ಸ್ಟೇಷನ್‌ ಹೆಡ್‌ ಆಫೀಸ್‌ ಶ್ರೇಣಿ ಮತ್ತು ಸಿವಿಲ್‌ ಪೊಲೀಸರ ಮೇಲೆ ಈಗ ಎನ್‌ಐಎ ಕಣ್ಣಿಟ್ಟಿದೆ. ಪಿಎಫ್‌ಐ ಬಗ್ಗೆ ತನಿಖೆ ನಡೆಸುತ್ತಿರುವ ಎನ್‌ಐಎಗೆ ಅಧಿಕಾರಿಗಳು ಹಣಕಾಸಿನ ವ್ಯವಹಾರ ನಡೆಸಿದ ಮಾಹಿತಿ ಲಭ್ಯವಾದ ಬೆನ್ನಲ್ಲೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಸ್ಪೆಷಲ್‌ ಬ್ರ್ಯಾಂಚ್‌, ಗುಪ್ತಚರ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಅಧಿಕಾರಿಗಳ ಜೊತೆ ಪಿಎಫ್‌ಐಗೆ ನಂಟಿದೆ.

ಕಳೆದ ಫೆಬ್ರವರಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರ ವಿವರವನ್ನು ಪಿಎಫ್‌ಐಗೆ ಸೋರಿಕೆ ಮಾಡಿದ ಹಿನ್ನೆಲೆಯಲ್ಲಿ ಇಡುಕ್ಕಿಯ ತೊಡುಪುಳದ ಸಿವಿಲ್‌ ಪೊಲೀಸ್‌ ಅಧಿಕಾರಿಯನ್ನು ಸೇವೆಯಿಂದಲೇ ವಜಾಗೊಳಿಸಲಾಗಿತ್ತು.

ಇದೇ ರೀತಿಯ ಆರೋಪದ ಹಿನ್ನೆಲೆಯಲ್ಲಿ ಮುನ್ನಾರ್‌ ಪೊಲೀಸ್‌ ಠಾಣೆಯ ಎಸ್‌ಐ ಸೇರಿದಂತೆ ಮೂವರನ್ನು ವರ್ಗಾವಣೆ ಮಾಡಲಾಗಿತ್ತು.

Share This Article
Leave a comment