20 ಶಾಸಕರ ಜೊತೆ HDK ಹೈದ್ರಾಬಾದ್ ಗೆ ಪಯಣ : ಕೆಸಿಆರ್ ಜೊತೆ ಹೊಸ ಪಕ್ಷ ಸ್ಥಾಪನೆಗೆ ಸಾಥ್

Team Newsnap
1 Min Read
ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಿದರೆ - ರೈತ ಮಹಿಳೆ ನಿಲ್ಲಿಸಿ ಗೆಲ್ಲಿಸುವೆ - ಹೆಚ್ ಡಿ ಕೆ

ತಮ್ಮ ಪಕ್ಷದ 20 ಶಾಸಕರ ಜತೆ ಮಾಜಿ ಸಿಎಂ ಜೆಡಿಎಸ್ ಮುಖ್ಯಸ್ಥ ಎಚ್ ಡಿ ಕುಮಾರಸ್ವಾಮಿ ಇಂದು ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದರು

ವಿಶೇಷ ವಿಮಾನದಲ್ಲಿ ಹೈದ್ರಾಬಾದ್ ಗೆ ತೆರಳಿದ ಹೆಚ್ ಡಿ ಕುಮಾರಸ್ವಾಮಿ ನಾಳೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ನೂತನ ಪಕ್ಷ ಸ್ಥಾಪನೆ ಘೋಷಣೆ ಮಾಡಲಿದ್ದಾರೆ ಆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ.ಇದನ್ನು ಓದಿ –ಉತ್ತರಾಖಂಡದಲ್ಲಿ ಹಿಮಪಾತಕ್ಕೆ 10 ಪರ್ವತಾರೋಹಿಗಳ ಸಾವು, 11 ಮಂದಿ ನಾಪತ್ತೆ

ಕುಮಾರಸ್ವಾಮಿ ಇಂದು ಹೈದ್ರಾಬಾದ್ ನಲ್ಲೇ ಶಾಸಕರ ಜತೆ ವಾಸ್ತವ್ಯ ಹೂಡಲಿದ್ದಾರೆ.ಭಾರತ ರಾಷ್ಟ್ರ ಸಮಿತಿ (BRS) ಪಕ್ಷ ಸ್ಥಾಪನೆ ಮಾಡಲಿರುವ ಕೆಸಿಆರ್ ಜೊತೆ ಸೇರಿ ರಾಷ್ಟ್ರೀಯ ಪಕ್ಷ ಸ್ಥಾಪನೆಗೆ ಸಾಥ್ ನೀಡಲಿದ್ದಾರೆ

ಹೊಸ ರಾಷ್ಟ್ರೀಯ ಪಕ್ಷ ಸ್ಥಾಪನೆ ಬಗ್ಗೆ ಸಿಎಂ ಕೆಸಿಆರ್ ಕೆಲ ತಿಂಗಳ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜತೆ ಚರ್ಚೆ ನಡೆಸಿದ್ದನ್ನು ಸ್ಮರಿಸಬಹುದು

ಈ ನಡುವೆ ಕೆಲ ತಿಂಗಳ ಹಿಂದೆಯಷ್ಟೇ ಹೈದ್ರಾಬಾದ್ ಗೆ ತೆರಳಿದ್ದ ಎಚ್ ಡಿಕೆ ಕೂಡ ಕೆಸಿಆರ್ ಜತೆ ಚರ್ಚೆ ನಡೆಸಿದ್ದರು.

Share This Article
Leave a comment