ಉತ್ತರಾಖಂಡದಲ್ಲಿ ಹಿಮಪಾತಕ್ಕೆ 10 ಪರ್ವತಾರೋಹಿಗಳ ಸಾವು, 11 ಮಂದಿ ನಾಪತ್ತೆ

Team Newsnap
1 Min Read

ಉತ್ತರಾಖಂಡದ ಪರ್ವತವೊಂದರಲ್ಲಿ ಹಿಮಪಾತದಿಂದ 10 ಮಂದಿ ತರಬೇತಿ ಪಡೆದ ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. ಇನ್ನು ನಾಪತ್ತೆಯಾದ ಎಂಟು ಜನರನ್ನ ರಕ್ಷಿಸಲಾಗಿದೆ. 11 ಮಂದಿ ನಾಪತ್ತೆಯಾಗಿದ್ದಾರೆ.

ಎಲ್ಲಾ ಪ್ರಶಿಕ್ಷಣಾರ್ಥಿಗಳು ಉತ್ತರಕಾಶಿಯ ನೆಹರು ಪರ್ವತಾರೋಹಣ ಸಂಸ್ಥೆಯವರು. ಉತ್ತರಾಖಂಡ ಪೊಲೀಸ್ ಮುಖ್ಯಸ್ಥ ಅಶೋಕ್ ಕುಮಾರ್ ಅವರು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಗಳು ರಕ್ಷಣಾ ಪ್ರಯತ್ನದಲ್ಲಿ ಸಹಾಯ ಮಾಡುತ್ತಿವೆ ಎಂದು ಹೇಳಿದರು. ರಾಜ್ಯದಲ್ಲಿ ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ : ಶಿವಮೊಗ್ಗ ಎಸ್ಪಿ ಎತ್ತಂಗಡಿ

16,000 ಅಡಿ ಎತ್ತರದಲ್ಲಿ ಬೆಳಿಗ್ಗೆ 9 ಗಂಟೆಗೆ ಹಿಮಪಾತವು ತಂಡಕ್ಕೆ ಅಪ್ಪಳಿಸಿತು.ಗಾಯಗೊಂಡ ಪ್ರಶಿಕ್ಷಣಾರ್ಥಿಗಳನ್ನು 13,000 ಅಡಿ ಎತ್ತರದಲ್ಲಿರುವ ಹತ್ತಿರದ ಹೆಲಿಪ್ಯಾಡ್ ಗೆ ಮತ್ತು ನಂತರ ರಾಜ್ಯ ರಾಜಧಾನಿ ಡೆಹ್ರಾಡೂನ್‍ಗೆ ಕರೆದೊಯ್ಯಲಾಗುತ್ತಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a comment