January 24, 2022

Newsnap Kannada

The World at your finger tips!

ಮಂಡ್ಯದಲ್ಲಿ ಧಾರಾಕಾರ ಮಳೆ – 400 ಮನೆಗಳಿಗೆ ನೀರು ನುಗ್ಗಿ ಅವಾಂತರ: ನಿವಾಸಿಗಳ ಪರದಾಟ

Spread the love

ಮಂಡ್ಯ ಜಿಲ್ಲೆಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಬೀಡಿ ಕಾಲೋನಿಯಲ್ಲಿ 400ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರಸೃಷ್ಠಿದೆ.

ಬಡಾವಣೆಯ ಜನರು ರಾತ್ರಿ ನಿದ್ರೆ ಇಲ್ಲದೇ ಮನೆಗೆ ನುಗ್ಗಿದ್ದ ನೀರನ್ನು ಹೊರಗೆ ಹಾಕಿದ್ದಾರೆ. ಬೀಡಿ ಕಾಲೋನಿ ನಿರ್ಮಾಣವಾಗಿರುವ ಜಾಗ ಈ ಹಿಂದೆ ಕೆರೆಯಾಗಿದ್ದು, ಸರ್ಕಾರ ಕೆರೆಯನ್ನು ಮುಚ್ಚಿ ಇಲ್ಲಿ ಕಾಲೋನಿಯನ್ನು ನಿರ್ಮಾಣ ಮಾಡಿತ್ತು.

ಮೂಲಭೂತ ಸೌಕರ್ಯಗಳನ್ನು ಮಾತ್ರ ಸರಿಯಾಗಿ ಒದಗಿಸಿಲ್ಲ. ಸರಿಯಾದ ಒಳ ಚರಂಡಿ ಇಲ್ಲದ ಕಾರಣ ಈ ಬಡಾವಣೆಯ ಮನೆಗಳಿಗೆ ಪ್ರತಿ ಬಾರಿ ಮಳೆ ಬಂದಂತಹ ಸಂದರ್ಭದಲ್ಲಿ ಮಳೆಯ ನೀರು ನುಗ್ಗುತ್ತಿದೆ.

error: Content is protected !!