ಯುಪಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸ್ಮಾಟ್‌ಫೋನ್, ಸ್ಕೂಟಿ ನೀಡುವ ಭರವಸೆ

Team Newsnap
1 Min Read

ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಮಾರ್ಟ್ಫೋನ್ ಮತ್ತು ಎಲೆಕ್ಟಿçಟ್ ಸ್ಕೂಟಿ ನೀಡಲಿದೆ ಎಂಬ ಭರ್ಜರಿ ಉಡುಗೊರೆಯ ಭರವಸೆಯನ್ನು ಆ ರಾಜ್ಯದಲ್ಲಿ ಉಸ್ತುವಾರಿಯಾಗಿರುವ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ನೀಡಿದ್ದಾರೆ.


ಇದು ಎಲ್ಲ ವಿದ್ಯಾರ್ಥಿನಿಯರಿಗಲ್ಲ. 12 ನೇ ತರಗತಿ ಪಾಸ್ ಆದವರಿಗೆ ಸ್ಮಾರ್ಟ್ಫೋನ್ ಮತ್ತು ಪದವೀಧರ ವಿದ್ಯಾರ್ಥಿನಿಯರಿಗೆ ಎಲೆಕ್ಟಿçಟ್ ಸ್ಕೂಟಿ ಕೊಡುವ ಅದಮ್ಯ ಬಯಕೆ ಪಕ್ಷಕ್ಕಿದೆ. ಅದೂ ಅಧಿಕಾರಕ್ಕೆ ಬಂದರೆ ಮತ್ತು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಚುನಾವಣಾ ಪ್ರಣಾಳಿಕೆ ಸಮಿತಿ ಸಮ್ಮತಿಯಂತೆ ಎಂದೂ ಅವರು ಹೇಳುವುದನ್ನು ಮರೆತಿಲ್ಲ.


ತಾವು ಕೆಲವು ವಿದ್ಯಾರ್ಥಿನಿಯರನ್ನು ಭೇಟಿಯಾಗಿದ್ದೆ. ತಮ್ಮ ವಿದ್ಯಾಭ್ಯಾಸಕ್ಕೆ ಹಾಗೂ ಭದ್ರತೆ ಕಾರಣದಿಂದ ಸ್ಮಾಟ್‌ಫೋನ್ ಅಗತ್ಯತೆ ಬಗ್ಗೆ ತಿಳಿಸಿದರು. ಇದನ್ನು ಅರಿತ ನಂತರ ಈ ಎರಡೂ ಕೊಡುಗೆಗಳನ್ನು ಕೊಡುವ ಚಿಂತನೆ ಮೂಡಿತು. ಇದು ತಮಗೆ ಬಹಳ ಸಂತಸ ತಂದಿದೆ ಎಂದು ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿದ್ದಾರೆ.


ಈ ಟ್ವೀಟ್‌ನೊಂದಿಗೆ ವಿದ್ಯಾರ್ಥಿನಿಯರ ಗುಂಪು ಮತ್ತು ಮಾಧ್ಯಮದವರೊಂದಿಗೆ ಸಂವಹನ ನಡೆಸುತ್ತಿರುವ ವಿಡಿಯೊವನ್ನೂ ಹಾಕಿದ್ದಾರೆ. ಯುಪಿ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಶೇ.40 ರಷ್ಟು ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಿದೆ ಎಂದು ಇತ್ತೀಚಿಗೆ ಅವರು ಪ್ರಕಟಿಸಿದ್ದರು.

Share This Article
Leave a comment