ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾಯಿಸಿದ ಕೇಂದ್ರ ಸರ್ಕಾರ ಟಿಪ್ಪು ಎಕ್ಸ್‌ಪ್ರೆಸ್ ಬದಲಾಗಿ ಒಡೆಯರ್ ಎಕ್ಸ್‌ಪ್ರೆಸ್ ರೈಲು ಎಂದು ನಾಮಕರಣ ಮಾಡಿದೆ.
ಹಲವು ದಿನಗಳಿಂದ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಿಸಿ ಎಂಬ ಒತ್ತಾಯ ಕೇಳಿ ಬಂದಿತ್ತು. ಈ ಸಂಬಂಧ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದರು. ದೆಹಲಿಯಲ್ಲಿ ಭೇಟಿಯಾಗಿ ಸಂಸದರು ಲಿಖಿತ ಮನವಿ ಕೂಡ ಸಲ್ಲಿಸಿದ್ದರು.ಇದನ್ನು ಓದಿ –ಪತ್ರಕರ್ತ ರಾಮುಮುದಿಗೌಡರ ಕುಟುಂಬಕ್ಕೆ 3 ಲಕ್ಷ ರು ಪರಿಹಾರ ನೀಡಿದ ಸಿಎಂ
ಮೈಸೂರಿಗೆ ರೈಲು ಸೇವೆ ಕಲ್ಪಿಸುವಲ್ಲಿ ಮಹಾರಾಜರ ಕೊಡುಗೆ ಅಪಾರ. ಹೀಗಾಗಿ ಒಡೆಯರ್ ಎಕ್ಸ್‌ಪ್ರೆಸ್ ಎಂದು ಹೆಸರಿಡಬೇಕು ಎಂದು ಒತ್ತಾಯಿಸಿದ್ದರು.
ರಾಜ ವಂಶಸ್ಥ ಯದುವೀರ್ ಒಡೆಯರ್, ಟಿಪ್ಪು ಎಕ್ಸ್‌ಪ್ರೆಸ್ ರೈಲ್ವೆ ಮರು ನಾಮಕರಣದ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಾವಣೆ ಮಾಡಿ ಒಡೆಯರ್ ಹೆಸರಿಟ್ಟರೆ ಒಳ್ಳೆಯದು. ಆದರೆ ಹೆಸರು ಬದಲಾವಣೆ ಮಾಡುವುದು ಸರ್ಕಾರಕ್ಕೆ ಬಿಟ್ಟ ವಿಷಯ, ಒಡೆಯರ್ ಎಂದಿದ್ದರು.
ಸಂಸದರೇ ಒಡೆಯರ್ ಹೆಸರಿನಲ್ಲಿ ಟ್ರೈನ್ ಬರಬೇಕು ಎಂದಿದ್ದಾರೆ. ಇದು ಸರ್ಕಾರದ ಇಚ್ಛೆ ಆದರೇ ಇದಕ್ಕೆ ಜನಸಾಮಾನ್ಯರ ಬೆಂಬಲವೂ ಬೇಕು. ಆಗಿನ ಕಾಲದಲ್ಲಿಯೇ ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರ್, ಹತ್ತನೇ ಕೃಷ್ಣರಾಜ ಒಡೆಯರ್ ರೈಲ್ವೆ ಸೇವೆಗೆ ಎಷ್ಟೆಲ್ಲಾ ಆದ್ಯತೆ ನೀಡಿದ್ದಾರೆ ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ. ಹೀಗಿರುವಾಗ ಒಡೆಯರ್ ಎಂದು ಮರು ನಾಮಕರಣ ಮಾಡುವುದು ಒಳ್ಳೆಯದು ಎಂದು ಯದುವೀರ್ ಈ ಹಿಂದೆಯೇ ಅಭಿಪ್ರಾಯಪಟ್ಟಿದ್ದರು.
ಕುವೆಂಪು ಎಕ್ಸ್ ಪ್ರೆಸ್ ನಾಮಕರಣ :
ಮೈಸೂರು – ತಾಳಗುಪ್ಪಾ ಎಕ್ಸ್ ಪ್ರೆಸ್ ರೈಲಿಗೆ ಕುವೆಂಪು ಎಕ್ಸ್ ಪ್ರೆಸ್ ಎಂದು ಮರು ನಾಮಕರಣ ಮಾಡಿ ಕೇಂದ್ರ ಆದೇಶ ಹೊರಡಿಸಿದೆ
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ