ಪತ್ರಕರ್ತ ರಾಮುಮುದಿಗೌಡರ ಕುಟುಂಬಕ್ಕೆ 3 ಲಕ್ಷ ರು ಪರಿಹಾರ ನೀಡಿದ ಸಿಎಂ

Team Newsnap
1 Min Read
CM gave compensation of 3 lakhs to journalist Ramumudi Gowda's family ಪತ್ರಕರ್ತ ರಾಮುಮುದಿಗೌಡರ ಕುಟುಂಬಕ್ಕೆ 3 ಲಕ್ಷ ರು ಪರಿಹಾರ ನೀಡಿದ ಸಿಎಂ

ಹಾವೇರಿ ಜಿಲ್ಲೆ ಹಿರೆಕೆರೂರು ತಾಲ್ಲೂಕಿನ ವಿಜಯ ವರದಿಗಾರ ಮತ್ತು ಹಾವೇರಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯು ಆಗಿದ್ದ ರಾಮು ಮುದಿಗೌಡರ ಅವರ ಕುಟುಂಬಕ್ಕೆ ಸರ್ಕಾರದ 3 ಲಕ್ಷ ರೂ ಪರಿಹಾರ ಜಮಾ ಆಗಿದೆ.

ಬ್ಯಾಂಕ್ ಅಕೌಂಟ್ ಗೆ ಹಣ ಜಮಾ ಆಗಿರುವುದನ್ನು, ರಾಮು ಮುದಿಗೌಡರ್ ಅವರ ಪತ್ನಿ ಶ್ರೀಮತಿ ಸುಮಂಗಲ ಅವರು ಪೋನ್ ಮಾಡಿ ಖಚಿತಪಡಿಸಿದ್ದಾರೆ.ಇದನ್ನು ಓದಿ –ರಾಜ್ಯ ಸರ್ಕಾರಿ ನೌಕರ’ರಿಗೆ ಶೇ.3.75ರಷ್ಟು ತುಟ್ಟಿಭತ್ಯೆ ಹೆಚ್ಚಳ : ಸಿಎಂ ಬೊಮ್ಮಾಯಿ ಗ್ರೀನ್ ಸಿಗ್ನಲ್


ತಮ್ಮ ಕಷ್ಟ ಕಾಲದಲ್ಲಿ ಕುಟುಂಬದ ಜೊತೆಗೆ ನಿಂತು ಪರಿಹಾರ ಕೊಡಿಸಲು ಹೋರಾಟ ಮಾಡಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ)ಕ್ಕೆ ಧನ್ಯವಾದ ತಿಳಿಸಿದ್ದಾರೆ.

ಕಳೆದ ವರ್ಷ ಅನಾರೋಗ್ಯ ಕಾರಣದಿಂದ ಬೆಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದ ರಾಮುಮುದಿಗೌಡರ ತಂಗಿ ರೇಣುಕಾ ಬದುಕುಳಿಯಲಿಲ್ಲ.
ಸಹೋದರಿಯ ಸಾವಿನ ನೋವಿನಲ್ಲಿ ಆಕೆಯ ಶವವನ್ನು ವಾಹನದಲ್ಲಿ ಹಿರೆಕೆರೂರಿಗೆ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಲಘು ಅಪಘಾತದಿಂದ ರಾಮು ಮುದಿಗೌಡರ್ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಜುಲೈ 1 ರಂದು ಮೃತಪಟ್ಟಿದ್ದರು.

ಒಂದೇ ದಿನ ಅಣ್ಣ-ತಂಗಿಯ ಶವ ಸಂಸ್ಕಾರ ಹಿರೆಕೆರೂರು ತಾಲ್ಲೂಕಿನ ಹಿರೆಮರಬ ಗ್ರಾಮದಲ್ಲಿ ನಡೆದಿತ್ತು. ಈ ಘಟನೆ ಎಲ್ಲರ ಮನಕಲಕಿತ್ತು.

ಕೆಯುಡಬ್ಲ್ಯೂಜೆ ಕೃತಜ್ಞತೆ:


ರಾಮುಮುದಿಗೌಡರ್ ಅವರ ಕುಟುಂಬ ಸಂಕಷ್ಟದಲ್ಲಿರುವ ಬಗ್ಗೆ ಹಾವೇರಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅವರ ಗಮನಕ್ಕೆ ತಂದಿತ್ತು.

ಕೆಯುಡಬ್ಲ್ಯೂಜೆ ಮನವಿ ಮೇರೆಗೆ ಪರಿಹಾರ ಮಂಜೂರು ಮಾಡಿದ್ದ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ, 3 ಲಕ್ಷ ರೂ ಪರಿಹಾರ ಬಿಡುಗಡೆಗೆ ಆದೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಕೆಯುಡಬ್ಲ್ಯೂಜೆ ಕೃತಜ್ಞತೆ ಸಲ್ಲಿಸಿದೆ.

Share This Article
Leave a comment