ದಾವಣಗೆರೆಯಲ್ಲಿ ತಮ್ಮ 75ನೇ ಹುಟ್ಟುಹಬ್ಬದ ಅಂವಾಗಿ ನಡೆದ ಸಿದ್ದರಾಮೋತ್ಸವ ಸಮಾವೇಶದಲ್ಲಿ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, 2022 ಆಗಸ್ಟ್ 15ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಆಗಲಿವೆ. ಹೀಗಾಗಿ ನಾವು ಇಡೀ ದೇಶಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದ್ದೇವೆ. ನನಗೂ ಇಂದಿಗೆ ಕಾಕತಾಳೀಯ ಎಂಬಂತೆ 75 ವರ್ಷಗಳು ಆಗಿದೆ. ನಾನು ಎಂದೂ ಬರ್ತ್ಡೇ ಮಾಡಿಕೊಂಡಿಲ್ಲ. ಇದಕ್ಕೆ ಕಾರಣ ನನ್ನ ಪಕ್ಷದ ಸ್ನೇಹಿತರು. ಎಲ್ಲರ ಒತ್ತಡಕ್ಕೆ ಮಣಿದು ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದೇನೆ ಎಂದರು.ಇದನ್ನು ಓದಿ –ಲಿಂಗಧೀಕ್ಷೆ ಪಡೆದ ರಾಹುಲ್ ಗಾಂಧಿ, ಮುರುಘಾ ಮಠದಲ್ಲಿ ಧ್ಯಾನ
ಇಂದಿನ ಕಾರ್ಯಕ್ರಮ ಯಶಸ್ವಿಯಾಗಲು ರಾಹುಲ್ ಗಾಂಧಿಯವರೇ ಕಾರಣ. ಆಗಲೇ ಅವರೇ ನನಗೆ ಯಾರ ಬರ್ತ್ಡೇ ಹೋಗೋದಿಲ್ಲ, ಸಿದ್ದರಾಮಯ್ಯ ಅಂದ್ರೆ ನನಗೆ ವಿಶೇಷ ಪ್ರೀತಿ. ಹಾಗಾಗಿ ಬಂದಿದ್ದೇನೆ ಎಂದಿದ್ದಾರೆ. ಅದಕ್ಕೆ ಕೋಟಿ ನಮನಗಳು ಎಂದರು.
ನನ್ನ ಮತ್ತು ಡಿ.ಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯ, ಬಿರುಕು ಇಲ್ಲ. ನಮ್ಮಿಬ್ಬರ ನಡುವೆ ಏನೋ ನಡೀತಿದೆ ಎಂಬುದು ಬಿಜೆಪಿಯವರು ಸೃಷ್ಟಿಸಿರುವ ಸುಳ್ಳು. ನಾವು ಚೆನ್ನಾಗಿಯೇ ಇದ್ದೇವೆ, ಒಟ್ಟಾಗಿ ಎಲೆಕ್ಷನ್ನಲ್ಲಿ ಗೆದ್ದು ಅಧಿಕಾರ ಹಿಡಿಯುತ್ತೇವೆ ಎಂದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು