June 1, 2023

Newsnap Kannada

The World at your finger tips!

politics

ಲಿಂಗಧೀಕ್ಷೆ ಪಡೆದ ರಾಹುಲ್ ಗಾಂಧಿ, ಮುರುಘಾ ಮಠದಲ್ಲಿ ಧ್ಯಾನ

Spread the love

ಚಿತ್ರದುರ್ಗದ ಮುರುಘಾ ಮಠದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಿಂಗ ದೀಕ್ಷೆ ಪಡೆದುಕೊಂಡಿದ್ದಾರೆ. ಮುರುಘಾ ಮಠಕ್ಕೆ ಭೇಟಿ‌ ನೀಡಿದ್ದ ವೇಳೆ ರಾಹುಲ್ ಡಾ. ಶಿವಮೂರ್ತಿ ಮುರುಘಾ ಶರಣರು ಲಿಂಗಧೀಕ್ಷೆ ನೀಡಿದ್ದಾರೆ.

ಮಠಕ್ಕೆ ಆಗಮಿಸುತ್ತಲೇ ಕರ್ತೃ ಗದ್ದುಗೆಗೆ ಭೇಟಿ ನೀಡಿದ ರಾಹುಲ್ ಗಾಂಧಿ, ಮಠದ ಕರ್ತೃ ಶ್ರೀ ಮುರಿಗಿ ಶಾಂತವೀರ ಸ್ವಾಮೀಜಿ ಗದ್ದುಗೆಗೆ ಪುಷ್ಪಾರ್ಚನೆ ಮಾಡಿ ಧ್ಯಾನ ಮಾಡಿದರು.

ಲಿಂಗಧೀಕ್ಷೆ ಪಡೆದುಕೊಂಡ ನಂತರ ನಮಗೆ ಲಿಂಗಪೂಜೆ ಇತ್ಯಾದಿಗಳ ಕುರಿತು ತರಬೇತಿ ನೀಡಲು ಯಾರನ್ನಾದರೂ ದೆಹಲಿಗೆ ಕಳುಹಿಸಲು ಕೋರಿಕೆ ಇಟ್ಟರು ಎಂದು ಮೂಲಗಳು ತಿಳಿಸಿವೆ.

ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀಗಳು, ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಠಾಧೀಶರು ರಾಹುಲ್ ಜೊತೆ ಸಂವಾದದಲ್ಲಿ ಭಾಗಿಯಾಗಿದ್ದರು.

error: Content is protected !!