ರಾಜ್ಯದಲ್ಲಿ ವಿದ್ಯುತ್ ದರ ಭಾರಿ ಏರಿಕೆ ಸಾಧ್ಯತೆ

Team Newsnap
1 Min Read
If the bill is not paid, the electricity will be cut! ಬಿಲ್ ಕಟ್ಟದಿದ್ದರೆ ಕರೆಂಟ್ ಕಟ್ !

ವಿದ್ಯುಚ್ಛಕ್ತಿ ನಿಗಮದ ಸಿಬ್ಬಂದಿ ವರ್ಗಕ್ಕೆ ಕೊಡಬೇಕಾಗಿರುವ ನಿವೃತ್ತಿ ವೇತನದ ಮೊತ್ತವನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಸರ್ಕಾರ ಮುಂದಾದ ಪರಿಣಾಮ ವಿದ್ಯುತ್ ದರದಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆ ಇದೆ.

ತಣ್ಣೀರು ಬಾವಿ ಮೊತ್ತಕ್ಕೆ ಸಂಬಂಧಿಸಿದಂತೆ 1,657 ಕೋಟಿ ರೂಪಾಯಿಗಳನ್ನು ತೆರಿಗೆ ಮೂಲಕ ಸಂಗ್ರಹಿಸಲು ಸರ್ಕಾರ ಸಿದ್ಧತೆ ನಡೆಸಿದೆ ಇದು ಕೂಡಾ ವಿದ್ಯುತ್ ದರ ಏರಿಕೆಗೆ ಕಾರಣವಾಗುತ್ತದೆ.68 ಪ್ರಯಾಣಿಕರಿದ್ದ ವಿಮಾನ ಪತನ: ಭಾರೀ ಸಾವು ನೋವಿನ ಆತಂಕ

ಒಂದೊಮ್ಮೆ ಸರ್ಕಾರದ ಈ ನಿರ್ಧಾರ ಅನುಷ್ಠಾನಕ್ಕೆ ಬಂದರೆ ಕೈಗಾರಿಕೆಗಳು ಮತ್ತು ಗೃಹೋಪಯೋಗಿ ವಿದ್ಯುತ್ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಮೂಲಗಳ ಪ್ರಕಾರ ಎಸ್ಕಾಂ ಗಳು ಸಲ್ಲಿಸಿರುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದರೆ

ಪ್ರತಿ ತಿಂಗಳು 30 ಸಾವಿರ ರೂಪಾಯಿ ವಿದ್ಯುತ್ ಬಿಲ್ ಪಾವತಿಸುತ್ತಿರುವ ಕೈಗಾರಿಕೆಗಳು 60 ರಿಂದ 65 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಹಾಗೆಯೇ 1500 ರೂಪಾಯಿ ವಿದ್ಯುತ್ ಬಿಲ್ ಪಾವತಿಸುತ್ತಿರುವ ಗೃಹ ಬಳಕೆ ಗ್ರಾಹಕರು 600 ರೂಪಾಯಿ ಸ್ಥಿರ ಶುಲ್ಕ ಸೇರಿ 2,100 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ ಎನ್ನಲಾಗಿದೆ.

Share This Article
Leave a comment