ಮಂಡ್ಯ ಜಿಪಂ ಮಾಜಿ ಅಧ್ಯಕ್ಷ ಅಣ್ಣೇಗೌಡ ನಿಧನ

Team Newsnap
1 Min Read

ಮಂಡ್ಯ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಚಿಕ್ಕಾಡೆ ಸಿ.ಅಣ್ಣೇಗೌಡ (85) ಭಾನುವಾರ ನಿಧನರಾದರು.

ಕಳೆದ ಮೂರು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು.68 ಪ್ರಯಾಣಿಕರಿದ್ದ ವಿಮಾನ ಪತನ: ಭಾರೀ ಸಾವು ನೋವಿನ ಆತಂಕ

ಅಣ್ಣೇಗೌಡರು ತಚಿಕ್ಕಾಡೆ ಸೊಸೈಟಿ ಅಧ್ಯಕ್ಷರಾಗುವ ಮೂಲಕ ರಾಜಕಾರಣ ಪ್ರವೇಶ ಮಾಡಿ ನಂತರ ಪಿಎಸ್‍ಎಸ್‍ಕೆ ಉಪಾಧ್ಯಕ್ಷರಾಗಿ, ಪಾಂಡವಪುರ ತಾಲ್ಲೋಕು ಬೋರ್ಡ್ ಅಧ್ಯಕ್ಷರಾಗಿದ್ದರು.

ನಂತರ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ದೀರ್ಘಕಾಲ ಸೇವೆ ಸಲ್ಲಿಸಿ ಬಳಿಕ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು.

ಇಂದು ಸಂಜೆ ಚಿಕ್ಕಾಡೆ ಗ್ರಾಮದಲ್ಲಿರುವ ಅಣ್ಣೇಗೌಡರ ತೋಟದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ

Share This Article
Leave a comment