ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್ : ಪತಿ ಆಸೆ ಪೂರೈಸಿದ ಮಡದಿ

Team Newsnap
1 Min Read

ರೇಖಾ ಸಿಂಗ್ ಬಿಹಾರ ರೆಜಿಮೆಂಟ್‍ನ 16ನೇ ಬೆಟಾಲಿಯನ್ ನಾಯಕ ಶಾಹಿದ್ ದೀಪಕ್ ಸಿಂಗ್ ಅವರನ್ನು ವಿವಾಹವಾಗಿದ್ದರು. ರೇಖಾ ಮತ್ತು ದೀಪಕ್ ವಿವಾಹವಾಗಿ ಕೇವಲ 15 ತಿಂಗಳುಗಳಾಗಿದ್ದವು.

ಇದನ್ನು ಓದಿ : D C ತಂಡದ ಪೃಥ್ವಿ ಶಾಗೆ ತೀವ್ರ ಜ್ವರ: ಆಸ್ಪತ್ರೆಗೆ ದಾಖಲು – ಬೌಲರ್ ಗೆ ಕೊವಿಡ್ ದೃಡ

ಜೂನ್ 15, 2020 ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ವಿರುದ್ಧ ಹೋರಾಡುತ್ತಿದ್ದಾಗ ದೀಪಕ್ ಸಿಂಗ್ ಹುತಾತ್ಮರಾದರು.

ದೀಪಕ್ ಸಿಂಗ್ ಅವರ ಧೈರ್ಯ ಮೆಚ್ಚಿದ ಸರ್ಕಾರ ಮರಣೋತ್ತರ ಪವಿತ್ರ ಪ್ರಶಸ್ತಿಯಾದ ‘ವೀರಚಕ್ರ’ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೀಡಿದರು.

ಇದನ್ನು ಓದಿ : ನೆಮ್ಮದಿಗೆ ಭಂಗ ತರಲು ಕೆಲ ಶಕ್ತಿಗಳು ಆಜಾನ್, ಸುಪ್ರಭಾತದ ಸಂಘರ್ಷ: ದೇವೇಗೌಡರ ವಿರೋಧ

ದೀಪಕ್ ಸಿಂಗ್ ಅವರಿಗೆ ಯೋಧ ಪರಂಪರೆಯನ್ನು ಮುಂದುವರಿಯಬೇಕು ಎಂಬ ಕನಸಿತ್ತು. ಅದಕ್ಕೆ ಸಾಥ್ ಕೊಟ್ಟ ರೇಖಾ ಸಿಂಗ್ ಯೋಧೆಯಾಗಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದರು.

ಹುತಾತ್ಮ ಯೋಧ

Share This Article
Leave a comment