May 21, 2022

Newsnap Kannada

The World at your finger tips!

sports

RCB ಅಬ್ಬರದ ಬ್ಯಾಟಿಂಗ್ : 68 ರನ್ ಗಳ ಭರ್ಜರಿ ಗೆಲುವು – ಹೈರಾಣಾದ ಹೈದರಾಬಾದ್​

Spread the love

IPL ಸೀಸನ್​​ 2022 ನ ಮುಂಬೈ ನ ವಾಂಖೇಡಿ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಹಸಿರು ಜರ್ಸಿ ತೊಟ್ಟ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು , ಸನ್​ರೈಸರ್ಸ್​ ಹೈದರಾಬಾದ್​ ವನ್ನು 68 ರನ್ ಗಳಿಂದ ಮಣಿಸಿತು.

ಇದನ್ನು ಓದಿ : ಫಾಫ್​​, ಡಿಕೆ, ಮ್ಯಾಕ್ಸಿ ಅಬ್ಬರದ ಬ್ಯಾಟಿಂಗ್​​.. ಹೈದರಾಬಾದ್​ಗೆ 193 ರನ್​​ ಗಳ ಬಿಗ್​ ಟಾರ್ಗೆಟ್​​​​.

SRH ತಂಡಕ್ಕೆ 193 ರನ್​​ ಗಳ ಬಿಗ್​ ಟಾರ್ಗೆಟ್​​ ನೀಡಿದ RCB ತಂಡವು ಬ್ಯಾಟಿಂಗ್ ಹಾಗೂ ಬೌಲಿಂಗ್ , ಫಿಲ್ಡಿಂಗ್ ನಲ್ಲೂ ಅದ್ಭುತ ಪ್ರದರ್ಶನ ನೀಡಿ ಸಾಂಘಿಕ ಗೆಲುವು ಕಂಡರು

rcb

38 ಬಾಲ್​ನಲ್ಲಿ ಬರೋಬ್ಬರಿ 48 ರನ್​ ರಜತ್ ಪಾಟಿದಾರ್ ಕ್ಯಾಚ್​ ನೀಡಿ ಔಟಾದರು. ಈ ಪೈಕಿ 4 ಫೋರ್​​​, 2 ಸಿಕ್ಸರ್​​​ ಬಾರಿಸಿ ಬೌಲರ್ಸ್​​ ಬೆವರಿಳಿಸಿದರು.

ಕೊನೆಯವರೆಗೂ ಕ್ರೀಸ್​​ನಲ್ಲೇ ನಿಂತ ಫಾಫ್​​ ಡುಪ್ಲೆಸಿಸ್​​ 8 ಫೋರ್​​, 2 ಸಿಕ್ಸರ್​​ ಜತೆಗೆ 50 ಬಾಲ್​​ನಲ್ಲಿ 73 ರನ್​​ ಸಿಡಿಸಿದರು. ಮ್ಯಾಕ್ಸ್​ವೆಲ್​​ 24 ಬಾಲ್​​ನಲ್ಲಿ 2 ಸಿಕ್ಸರ್​​​, 3 ಫೋರ್​​ನಿಂದ 33 ರನ್​​ ಗಳಿಸಿದರು.

ಮಾಂತ್ರಿಕ ದಿನೇಶ್​ ಕಾರ್ತಿಕ್​​​, ಕೇವಲ 8 ಬಾಲ್​​ನಲ್ಲಿ 30 ರನ್​ ಅಂದರೆ ಬರೋಬ್ಬರಿ 4 ಸಿಕ್ಸರ್​​​, 1 ಬೌಂಡರಿ ಸಿಡಿಸಿದರು.

ಇದನ್ನು ಓದಿ : D C ತಂಡದ ಪೃಥ್ವಿ ಶಾಗೆ ತೀವ್ರ ಜ್ವರ: ಆಸ್ಪತ್ರೆಗೆ ದಾಖಲು – ಬೌಲರ್ ಗೆ ಕೊವಿಡ್ ದೃಡ

SRH ತಂಡ 125 ರನ್ ಗಳಿಗೆ ಸರ್ವ ಪತನ :

ನಂತರ ಬ್ಯಾಟಿಂಗ್ ಆರಂಭದಲ್ಲೇ ಹೈದ್ರಾಬಾದ್ ತಂಡ 3 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಕಠಿಣ ಪರಿಸ್ಥಿತಿ ಎದುರಿಸುವ ಸ್ಥಿತಿ ಬಂದಿದೆ.

SRH ತಂಡದಲ್ಲಿ ರಾಹುಲ್ ತ್ರಿಪಾಠಿ 58 ರನ್ ಗಳಿಸಿದನ್ನು ಬಿಟ್ಟರೆ ಉಳಿದ ಆಟಗಾರರು ಹೇಳಿಕೊಳ್ಳುವಷ್ಟು ರನ್ ಗಳಿಸುವಲ್ಲಿ ವಿಫಲವಾದರು.

error: Content is protected !!