ಮಂಡ್ಯದ 5 ರು ವೈದ್ಯ ಡಾ. ಶಂಕರೇಗೌಡರು ಬೆಂಗಳೂರಿನ ಪೋರ್ಟಿಸ್ ಗೆ ಶಿಪ್ಟ್

Team Newsnap
1 Min Read
The doctor of the Mandya 5 Rs. Shifed to Portis, Bangalore

ಹೃದಯಾಘಾತಕ್ಕೆ ಒಳಗಾಗಿದ್ದ 5 ರು ವೈದ್ಯ ಡಾ ಶಂಕರೇಗೌಡರಿಗೆ ಮೈಸೂರಿನ ಅಪೋಲೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಪ್ಟ್ ಮಾಡಲಾಗಿದೆ

ಇದನ್ನು ಓದಿ –ಮಾಗಡಿಯಲ್ಲಿ SSLC ಪ್ರಶ್ನೆ ಪತ್ರಿಕೆ ಸೋರಿಕೆ – ಪ್ರೌಢಶಾಲೆಯ ಗುಮಾಸ್ತನ ಬಂಧನ

ಕಳೆದ ಮೂರು ದಿನಗಳಿಂದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು . ಈಗ ಡಾ ಶಂಕರೇಗೌಡರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿರುವುದರಿಂದ, ಬೆಂಗಳೂರಿನ ಪೋರ್ಟೀಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಕುಟುಂಬಸ್ಥರು ಮತ್ತು ವೈದ್ಯರು ತಿಳಿಸಿದ್ದಾರೆ

ಡಾ ಶಂಕರೇಗೌಡರು ಆರೋಗ್ಯವಾಗಿದ್ದಾರೆ. ಯಾವುದೇ ಗಾಬರಿ ಬೇಡ. ಹೆಚ್ಚಿನ ಚಿಕಿತ್ಸೆಯ ಕಾರಣಕ್ಕಾಗಿ ಶಂಕರೇಗೌಡರನ್ನು ಬೆಂಗಳೂರಿಗೆ ಶಿಪ್ಟ್ ಮಾಡಲಾಗುತ್ತಿದೆ ಎನ್ನುವುದನ್ನು ಕುಟುಂಬದವರು ಸ್ಪಷ್ಟವಾಗಿ ಹೇಳಿದ್ದಾರೆ.

ಬೆಂಗಳೂರಿಗೇಕೆ ಶಿಪ್ಟ್ ?

ಹೃದಯದ ಮೂರು ರಕ್ತ ನಾಳಗಳು ಬ್ಲಾಕ್ ಆಗಿವೆ. ಸ್ಟಂಟ್ ಕೂಡ ಅಳವಡಿಕೆ ಮಾಡಿದ್ದರೂ ಸಹ ಬೈಪಾಸ್ ಮಾಡಬೇಕೆಂಬ ವೈದ್ಯರ ಸಲಹೆಯನ್ನು ಮಾನ್ಯ ಮಾಡಿರುವ ಕುಟುಂಬದವರು ಬೆಂಗಳೂರಿಗೆ ಶಿಪ್ಟ್ ಮಾಡಿದ್ದಾರೆ

ಅಲ್ಲದೆ ನಿನ್ನೆಯಿಂದ ಎಲ್ಲಾ ಮಾಧ್ಯಮಗಳಲ್ಲಿ ಡಾ ಶಂಕರೇಗೌಡರ ಆರೋಗ್ಯ ಸುದ್ದಿ ತಿಳಿದ ಅಭಿಮಾನಿಗಳು ಮೈಸೂರಿನ ಅಪೋಲೊ ಅಸ್ಪತ್ರೆ ಗೆ ತೆರಳಿ ಕಳವಳ ಮತ್ತು ಅವರ ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿದ್ದಾರೆ. ಹೀಗಾಗಿ ಜನ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ವೈದ್ಯ ಶಂಕರೇಗೌಡರಿಗೆ ಸೋಂಕು ತಗುಲ ಸಾಧ್ಯತೆ ಇದೆ ಎಂಬ ವೈದ್ಯರ ಎಚ್ಚರಿಕೆಯೂ ಕೂಡ ಬೆಂಗಳೂರಿಗೆ ಶಿಪ್ಟ್ ಮಾಡಲು ಒಂದು ಕಾರಣವಾಗಿದೆ

Share This Article
Leave a comment