ಮಳಲಿ ಮಸೀದಿಯಲ್ಲಿ ದೇವರ ಸಾನಿಧ್ಯ ಗೋಚರ : ತಾಂಬೂಲ ಪ್ರಶ್ನೆ ‌ಅಂತ್ಯ‌

Team Newsnap
1 Min Read

ಮಂಗಳೂರಿನ ಮಳಲಿ ಮಸೀದಿಯಲ್ಲಿ ದೇವಸ್ಥಾನ ಕುರುಹುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬುಧವಾರ ಕೇರಳದ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ಬಹಾಕಿದ ತಾಂಬೂಲ ಪ್ರಶ್ನೆಯಲ್ಲಿ ಸ್ಪಷ್ಟವಾಗಿ ಗುರುಸಾನಿಧ್ಯ ಇರುವುದು ಗೋಚರವಾಗಿದೆ.

ಕುಂಭ ರಾಶಿಯಲ್ಲಿ ತಾಂಬೂಲ ಪ್ರಶ್ನೆಯ ಮಾಡಿದ ಬಳಿಕ ಈ ಚಿಂತನೆಯಲ್ಲಿ ಈಗಿನ ಮಸೀದಿ ಜಾಗದಲ್ಲಿ ಹಿಂದೆ ಗುರುಮಠವಿತ್ತು. ಅಲ್ಲಿ ಶಿವನ ಆರಾಧನೆ ಆಗಿರಬಹುದೆಂದು ತಿಳಿದು ಹಿಂದಿನ‌ ಕಾಲದ ವ್ಯಾಜ್ಯವೊಂದರ ಪರಿಣಾಮ ಇಲ್ಲಿ ಹಿಂದೆ ಇದ್ದ ದೈವ ಸಾನಿಧ್ಯವು ನಾಶವಾಗಿದೆ. ಹಾಗಾಗಿ ಹಿಂದೆ ಇದ್ದವರು ಅಲ್ಲಿಂದ ಸ್ಥಳಾಂತರಗೊಂಡಿದ್ದಾರೆ ಎಂದಿದ್ದಾರೆ

ದೈವ ಸಾನಿಧ್ಯವು ಅಲ್ಲಿಂದ ಪೂರ್ತಿಯಾಗಿ ಹೋಗಿಲ್ಲ. ಯಾವ ಸ್ಥಳದಲ್ಲಿ ದೈವ ಸಾನಿಧ್ಯವಿದೆ ಎಂಬುದನ್ನು ಉತ್ಖನನ ಮಾಡಬೇಕು. ಆ ಸಾನಿಧ್ಯದಲ್ಲಿ ಜೀವ ಕಳೆಯಿದೆ. ಆದ್ದರಿಂದ ಹೇಗಾದರೂ ಅದು ಪತ್ತೆಯಾಗುತ್ತದೆ ಎಂದು ಹೇಳಿದ್ದಾರೆ.

ಶೈವ – ವೈಷ್ಣವ ವಿವಾದದಲ್ಲಿ ಇಲ್ಲಿನ ಹಿಂದಿನ ದೈವ ಸಾನಿಧ್ಯ ನಾಶವಾಗಿದೆ‌. ಈ ಸಂದರ್ಭ ಮರಣವೊಂದು ಘಟಿಸಿದೆ. ಆ ಬಳಿಕ ಹಿಂದೆ ಅಲ್ಲಿದ್ದವರು ಈ ದೈವ ಸಾನಿಧ್ಯವನ್ನು ಬೇರೆಲ್ಲಿಯೋ ಆರಾಧನೆ ಮಾಡುತ್ತಿದ್ದಾರೆ‌. ಅದರ ಫಲವಾಗಿ ಈಗಲೂ ಈ ಮಸೀದಿಯ ಸ್ಥಳದಲ್ಲಿರುವ ದೈವಸಾನಿಧ್ಯಕ್ಕೆ ಚೈತನ್ಯ ಶಕ್ತಿ ಇದೆ. ಆದ್ದರಿಂದ ಈಗ ಅದು ಗೋಚರವಾಗಿದೆ ಎಂದರು.

ಇದನ್ನು ಓದಿ :ಶೇ 1ರಷ್ಟು ಕಮೀಷನ್ ಪಡೆದ ಆರೋಪ ಪಂಜಾಬ್ ಆರೋಗ್ಯ ಸಚಿವರನ್ನೇ ವಜಾಗೊಳಿಸಿದ ಸಿ ಎಂ

ಎಲ್ಲಾ ಸಮಾಜದವರು ಒಗ್ಗಟ್ಟಾಗಿ ಸಮ್ಮತದಿಂದ ಈ ವಿವಾದವನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಊರಿಗೆ ಗಂಡಾಂತರವಿದೆ. ಈ ದೈವ ಸಾನಿಧ್ಯ ಅಭಿವೃದ್ಧಿ ಆದಲ್ಲಿ ಈಗ ಅಲ್ಲಿ ಇದ್ದವರಿಗೂ ಉತ್ತಮವೇ. ಆದ್ದರಿಂದ ಎಲ್ಲರೂ ಒಟ್ಟಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದು ದೈವಜ್ಞರು ಹೇಳಿದ್ದಾರೆ.

Share This Article
Leave a comment