ಉಕ್ರೇನ್​ನ 2 ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ – ರಷ್ಯಾ

Team Newsnap
1 Min Read

ಉಕ್ರೇನ್​​ನ ಪ್ರಮುಖ ಎರಡು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ

ಉಕ್ರೇನ್‌ನಲ್ಲಿ ಸಿಲುಕಿದ ನಾಗರಿಕರ ಸ್ಥಳಾಂತರಕ್ಕಾಗಿ ಈ ಕದನ ವಿರಾಮ ಘೋಷಿಸಲಾಗಿದೆ.

ಮರಿಯುಪೋಲ್, ವೆಲ್ನೋವಾಖಾದಲ್ಲಿ ಕದನ ವಿರಾಮ ಘೋಷಣೆ ಮಾಡಲಾಗಿದೆ. 

ಭಾರತೀಯ ಕಾಲಮಾನ ಬೆಳಗ್ಗೆ 11.30ವೇಳೆಗೆ ತಾತ್ಕಾಲಿಕ ಕದನ ವಿರಾಮ ಘೋಷಣೆಯನ್ನು ರಷ್ಯಾ ಮಾಡಿದೆ.

ಉಕ್ರೇನಾದ್ಯಂತ ಯಾವುದೇ ಬಾಂಬ್ ದಾಳಿ, ಶೆಲ್ ದಾಳಿ ಹಾಗೂ ಏರ್​ಸ್ಟ್ರೈಕ್ ಮಾಡದಿರಲು ರಷ್ಯಾ ನಿರ್ಧರಿಸಿದೆ.

ಬೆಳಗ್ಗೆ 11.30 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ರಷ್ಯಾ ಕದನ ವಿರಾಮ ಘೋಷಣೆ ಮಾಡಿದೆ ಅಂತಾ ಹೇಳಲಾಗುತ್ತಿದೆ. ರಷ್ಯಾದ ಯುದ್ಧ ಭೀಕರವಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರನ್ನ ಸುರಕ್ಷಿತ ಸ್ಥಳಕ್ಕೆ ಸೇರಿಸುವ ಉದ್ದೇಶದಿಂದ ಹ್ಯೂಮನ್ ಕಾರಿಡಾರ್​ಗೆ ಉಕ್ರೇನ್ ಇಂದು ಮನವಿ ಮಾಡಿತ್ತು.

ವೃದ್ಧರು, ಮಕ್ಕಳು, ಗರ್ಭಿಣಿಯರನ್ನ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಲು ಅವಕಾಶ ಮಾಡಿಕೊಡಿ ಎಂದು ಉಕ್ರೇನ್ ಕೋರಿಕೊಂಡಿತ್ತು.

Share This Article
Leave a comment