May 21, 2022

Newsnap Kannada

The World at your finger tips!

chap

ನಕಲಿ ಛಾಪಾ ಕಾಗದ ಹಗರಣ ಬಯಲು ಮಾಡಿದ ಸಾಮಾಜಿಕ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

Spread the love

ಬೆಳಗಾವಿಯ ಖಾನಾಪುರದ ಸಾಮಾಜಿಕ ಕಾರ್ಯಕರ್ತ ಜಯಂತ್ ಮುಕುಂದ್ ತಿನೇಕರ್(62) ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಏಳೆಂಟು ಜನರ ಗುಂಪೊಂದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ಜಯಂತ್ ಅವರನ್ನು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಖಾನಾಪುರ-ಬೆಳಗಾವಿ ಹೆದ್ದಾರಿಯ ಝಾಡ್ ಶಹಾಪುರ ಬಳಿ ಹಿಂಬಾಲಿಸಿಕೊಂಡು ಬಂದ ಮುಸುಕುಧಾರಿಗಳು ಜಯಂತ್ ಅವರ ಕಾರು ತಡೆದು ಕಬ್ಬಿಣದ ರಾಡ್‌ಗಳಿಂದ ಥಳಿಸಿದ್ದಾರೆ.

ಈ ವೇಳೆ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಲ ಲಾರಿ ಚಾಲಕರು ಸಹಾಯಕ್ಕೆ ಧಾವಿಸಿದ್ದಾರೆ.

ಹಲ್ಲೆ ಮಾಡಿದ ಆರೋಪಿಗಳು ಅಪರಿಚಿತರಾಗಿದ್ದಾರೆ, ಮುಖಕ್ಕೆ ಸ್ಕಾರ್ಫ್ ಹಾಕಿಕೊಂಡಿದ್ದರು. ಹಲ್ಲೆ ವೇಳೆ ಜಯಂತ್ ಅವರ ಬಲಗಾಲು, ಮೊಣಕಾಲು, ಭುಜ ಹಾಗೂ ಬಲಗೈಗೆ ಗಂಭೀರ ಗಾಯಗಳಾಗಿವೆ.

ಖಾನಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಬೆಳಗಾವಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!