10 ಸಾವಿರ ಲಂಚ ಪಡೆಯುವ ವೇಳೆ ಶ್ರೀರಂಗಪಟ್ಟಣದಲ್ಲಿ ಸರ್ವೇ ಅಧಿಕಾರಿ ಎಸಿಬಿ ಬಲೆಗೆ

Team Newsnap
1 Min Read

ಭೂಮಾಪನ ಕಚೇರಿಯ ಸರ್ವೇ ಅಧಿಕಾರಿ 10 ಸಾವಿರ ರು ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಮಿನಿ ವಿಧಾನಸೌಧದಲ್ಲಿನ ಭೂ ಮಾಪನ ಇಲಾಖೆಯ ಸರ್ವೇ ಸೂಪರ್ ವೈಸರ್ ಲೋಕೇಶ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.

ಲೋಕೇಶ್ ವಿರುದ್ದ ಎಸಿಬಿ ಕಚೇರಿಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದವು. ಸಾರ್ವಜನಿಕರ ದೂರಿನ ಅನ್ವಯ ಹಲವು ದಿನಗಳಿಂದ ಎಸಿಬಿ ಅಧಿಕಾರಿಗಳು ದಾಳಿ ನಡೆಸಬೇಕೆಂದು ಪ್ಲಾನ್ ಮಾಡುತ್ತಿದ್ದರು.

ರೈತನೋರ್ವ ತನ್ನ ಜಮೀನು ದುರಸ್ತಿಗೆ ಲೋಕೇಶ್ ಬಳಿ ಬಂದಾಗ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಆ ರೈತ ಅಡ್ವಾನ್ಸ್ 3 ಸಾವಿರ ರೂಪಾಯಿಯನ್ನು ಲೋಕೇಶ್‍ಗೆ ನೀಡಿದ್ದ.

ಬಳಿಕ ಎಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ವೇಳೆ ನೀನು ಉಳಿದ 10 ಸಾವಿರ ನೀಡು, ನಾವು ಅಧಿಕಾರಿಯನ್ನು ಅರೆಸ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ರೈತ ಇಂದು 10 ಸಾವಿರ ರುಗಳನ್ನು ಲೋಕೇಶ್‍ಗೆ ನೀಡುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಲೋಕೇಶ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ದಾಳಿ ಎಸಿಬಿ ಡಿವೈಎಸ್‍ಪಿ ಧರ್ಮೇಂದ್ರ ನೇತೃತ್ವದಲ್ಲಿ ನಡೆದಿದೆ.

Share This Article
Leave a comment