May 26, 2022

Newsnap Kannada

The World at your finger tips!

chini

ಪಾಕಿಸ್ತಾನದ ಕರಾಚಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: 3 ಚೀನಿಯರು ಸೇರಿ ನಾಲ್ವರ ಸಾವು

Spread the love

ಪಾಕಿಸ್ತಾನದ ಕರಾಚಿಯಲ್ಲಿನ ವಿಶ್ವವಿದ್ಯಾಲಯದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ಕೃತ್ಯದಲ್ಲಿ ಮೂವರು ಚೀನಿ ಪ್ರಜೆಗಳು ಸೇರಿ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವ ಚೀನಿಯರಲ್ಲಿ ಇಬ್ಬರು ಮಹಿಳಾ ಪ್ರೊಫೆಸರ್.

ಪಾಕ್​ನಲ್ಲಿ ತನ್ನನ್ನೇ ತಾನು ಸ್ಫೋಟಿಸಿಕೊಂಡ ಹಿಜಾಬ್​​ಧಾರಿ ಮಹಿಳೆ 3 ಚೀನಿಯರು ಸೇರಿ ನಾಲ್ವರ ಸಾವನ್ನಪ್ಪಿದ್ದಾರೆ. ಬುರ್ಖಾ ಧರಸಿ ಬಂದ ಮಹಿಳೆ ಒಬ್ಬರು ತನ್ನನ್ನೇ ಸ್ಫೋಟಿಸಿಕೊಂಡಿದ್ದಾಳೆ. ಸ್ಫೋಟಿಸಿಕೊಳ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ದೌಡಾಯಿಸಿ, ಗಾಯಗೊಂಡರ ರಕ್ಷಣೆಯಲ್ಲಿ ತೊಡಗಿದ್ದಾರೆ.

ಕ್ಲಾಸ್ ಮುಗಿದ ಬಳಿಕ ಚೈನೀಸ್ ವಿದ್ಯಾರ್ಥಿಗಳು ಮತ್ತು ಲೆಕ್ಚರ್​ಗಳನ್ನ ವಾಹನವೊಂದು ಕರೆದುಕೊಂಡು ಬರುತ್ತಿತ್ತು. ಈ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ.

ಚೀನಾ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ಜುಲೈನಲ್ಲಿ ಇಬ್ಬರು ನಾಗರಿಕನ್ನು ಅಪರಿಚಿತರು ಗುಂಡಿಕ್ಕಿ ಕೊಲೆ ಮಾಡಿದ್ದರು.

error: Content is protected !!