PSI ನೇಮಕಾತಿ ಹಗರಣ; ಬಿಜೆಪಿ ನಾಯಕಿ ದಿವ್ಯಾ ಸೇರಿ 6 ಆರೋಪಿಗಳಿಗೆ ಅರೆಸ್ಟ್ ವಾರೆಂಟ್ ಜಾರಿ

Team Newsnap
1 Min Read

ಪಿಎಸ್‌ಐ (PSI) ನೇಮಕಾತಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ 3ನೇ JMFC ಕೋರ್ಟ್ ದಿವ್ಯಾ ಹಾಗರಗಿ ಸೇರಿ ಆರು ಆರೋಪಿಗಳಿಗೆ ಬಂಧನದ ವಾರೆಂಟ್ ಜಾರಿ ಮಾಡಿದೆ.

ಇದೇ ಮೊದಲು ತನಿಖೆ ಅವಧಿಯಲ್ಲಿಯೇ ಆರೋಪಿಗಳಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ.

ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ರವೀಂದ್ರ ಮೇಳಕುಂದಿ, ಅರ್ಚನಾ, ಕಾಶಿನಾಥ್, ಶಾಂತಿಬಾಯಿ ಆರೊಪಿಗಳಿಗೆ ಅರೆಸ್ಟ್​ ವಾರೆಂಟ್​ ನೀಡಲಾಗಿದೆ.

ಕರ್ನಾಟಕದ ಅಪರಾಧ ಪ್ರಕರಣಗಳಲ್ಲಿ ಇದೊಂದು ಅಪರೂಪ ಪ್ರಕರಣ ಎಂದು ಹೇಳಲಾಗಿದೆ.

ಈ ಹಿಂದೆ ಮುಂಬೈ ಬ್ಲಾಸ್ಟ್ ಸಂದರ್ಭದಲ್ಲಿ ದಾವೂದ್ ಇಬ್ರಾಹಿಂಗೆ ಕೋರ್ಟ್ ಅರೆಸ್ಟ್ ವಾರೆಂಟ್ ನೀಡಲಾಗಿತ್ತು. ಈ ಪ್ರಕರಣ ಉಲ್ಲೇಖಿಸಿ ಸಿಐಡಿ ಅರೆಸ್ಟ್​ ವಾರೆಂಟ್ ಕೋರಿದೆ. ಒಂದು ವಾರದ ಒಳಗಡೆ ಆರೋಪಿಗಳು ಸರೆಂಡರ್ ಆಗಬೇಕು. ಇಲ್ಲದಿದ್ದರೆ ಘೋಷಿತ ಆರೋಪಿ ಎಂದು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡಲಾಗಿದೆ.

Share This Article
Leave a comment